ಕಾರ್ಕಳದ ಒಳಚರಂಡಿ ತ್ಯಾಜ್ಯ ಉದ್ಯಾವರ ಹೊಳೆಗೆ ಲೀನ

Picture of RB NEWS

RB NEWS

Bureau Report

ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಒಳಚರಂಡಿಯ ತ್ಯಾಜ್ಯ ನೀರು ಉದ್ಯಾವರ ಹೊಳೆಯಲ್ಲಿ ಲೀನವಾಗುತ್ತಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.


1994ರಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದ ಡಾ. ವೀರಪ್ಪ ಮೊಯಿಲಿ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಹಲವು ಯೋಜನೆಯನ್ನು ಅನುಷ್ಠಾನಗೊಳಿಸಿದ್ದರು. ಅವುಗಳಲ್ಲಿ ಒಳಚರಂಡಿ ಯೋಜನೆಯೂ ಒಂದಾಗಿದೆ.
ಅಂದು ರೂ.50 ಲಕ್ಷ ವೆಚ್ಚದಲ್ಲಿ ಒಳಚರಂಡಿ ಯೋಜನೆ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ಹಾದು ಹೋಗಿತ್ತು.
ಜನಸಂಖ್ಯೆಗೆ ಹೆಚ್ಚುತ್ತಿದ್ದಂತೆ ಹಳೆಯದಾದ ಯೋಜನೆಯಲ್ಲಿ ಉಂಟಾದ ಕೆಲ ಸಮಸ್ಸೆಗಳಿಂದಾಗಿ ಮತ್ತೇ ಕಾರ್ಕಳಕ್ಕೆ ಒಳಚರಡಿ ಯೋಜನೆಯ ಭಾಗ್ಯ ದೊರೆತ್ತಿರುವುದು 2020ರ ಅವಧಿಯಲ್ಲಿ. 1994ರಲ್ಲಿ ಹಾದೂ ಹೋಗಿದ್ದ 11.5 ಕಿ.ಮೀ ಉದ್ದದ ಒಳಚರಂಡಿ ಲೈನ್‌ನ ಹಳೆ ಪೈಪ್ ನ ಪೈಕಿ 3.ಕಿ.ಮೀ ವರೆಗೆ ಹಳೆ ಪೈಪ್ ಹೊರತೆಗೆದು ಅದೇ ಹಾದಿಯಲ್ಲಿ ಹೊಸ ಪೈಪ್ ಲೈನ್ ಅಳವಡಿಸುವ ಕಾರ್ಯ ಅದಾಗಿದ್ದು, 3 ಕಿ.ಮೀ ವರೆಗೆ ಒಳಚರಂಡಿ ಯೋಜನೆಗೆ ರೂ.13 ಕೋಟಿ ಅನುದಾನ ವಿನಿಯೋಗಿಸಲಾಗಿದೆ.

ಕಾಮಗಾರಿಯ ವೇಳೆಗೆ ಹಲವು ನ್ಯೂನತೆಗಳು ಕಂಡುಬAದಿದ್ದು, ಅದರಲ್ಲೂ ಪ್ರಮುಖವಾಗಿ ಕಾರ್ಕಳದ ರಥಬೀದಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಒಳಚರಂಡಿಯಿoದ ತ್ಯಾಜ್ಯ ನೀರು ಉಕ್ಕಿ ಹೊರಬರುತ್ತಿತ್ತು. ಇದು ಭಾರೀ ವಿವಾದಕ್ಕೂ ಕಾರಣವಾಗಿತ್ತು. ಪಕ್ಷಾತೀತ ನೆಲೆಯಲ್ಲಿ ನಾಗರಿಕರು ಈ ಕಾಮಗಾರಿಯ ಕುರಿತು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.

ಕಾರ್ಕಳ:  “ಪುರಸಭಾ ವ್ಯಾಪ್ತಿಯಲ್ಲಿ ಪ್ರಸ್ತುತ 11.5 ಕಿ.ಮೀ ಒಳಚರಂಡಿ ವ್ಯವಸ್ಥೆ ಇದ್ದು, ಅದರ ನವೀಕರಣ ಯೋಜನೆಗೆ 32 ಕೋಟಿ ರೂ. ಪ್ರಸ್ತಾಪವನ್ನು ಸರಕಾರದ ಮುಂದಿರಿಸಲಾಗಿದೆ. ರಾಜ್ಯ ಸರಕಾರದಿಂದ ಬಿಡುಗಡೆಗೊಂಡ 13 ಕೋಟಿ ರೂ. ವೆಚ್ಚದಲ್ಲಿ ಮೂರು ಕಿ.ಮೀವರೆಗಿನ ಒಳಚರಂಡಿ ಹಾಗೂ ನೂತನ ಶುದ್ಧೀಕರಣ ಘಟಕ ನಿರ್ಮಾಣಕ್ಕೆ 8 ಕೋಟಿ ರೂ. ವೆಚ್ಚವಾಗಿದ್ದು, ನಿರ್ವಹಣೆಗಾಗಿ 1.5 ಕೋಟಿ ರೂ.ಮೀಸಲಿಡಲಾಗಿದೆ” ಎಂದು ಕರ್ನಾಟಕ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಹಣಾ ಅಭಿಯಂತರ ರಕ್ಷಿತ್ ರಾವ್ ಅವರು 2021 ಸ.19ರಂದು ಪುರಸಭೆಯಲ್ಲಿ ಆಯೋಜಿಸಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಮಾಹಿತಿ ನೀಡಿದ್ದರು.

ಒಂದೆಡೆಯಲ್ಲಿ ಕರೋನಾದ ಭೀತಿಯಿಂದಾಗಿ ಜನಜೀವನದ ಮೇಲೆ ಕರಿಛಾಯೆ ಮೂಡಿತ್ತು. ಆ ಸಂದರ್ಭದಲ್ಲಿ ಒಳಚರಂಡಿ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಕರೋನಾದ ಕರಿಛಾಯೆ ಕ್ಷೀಣಿಸುತ್ತಿದ್ದಂತೆ ಕಾರ್ಕಳದಲ್ಲಿ ಒಳಚರಂಡಿ ಕಾಮಗಾರಿಯೂ ಶುರುವಾಗಿತ್ತು.
ವಾಹನ ಓಡಾಟಕ್ಕೆ ಹಾಗೂ ಕಾಮಗಾರಿಯ ಧೂಳಿನಿಂದ ನಾಗರಿಕರು ಒಂದಿಷ್ಟು ಸಂಕಷ್ಟ ಎದುರಿಸಿದ್ದರು.


1994ರಲ್ಲಿ ಮೊಟ್ಟಮೊದಲ ಬಾರಿಗೆ ಕಾರ್ಕಳ ವ್ಯಾಪ್ತಿಯಲ್ಲಿ ಜಾರಿ ತಂದ ಯೋಜನೆಯಾಗಿರುವ ಒಳಚರಂಡಿಯ ತ್ಯಾಜ್ಯ ಸಂಸ್ಕರಣ ಘಟಕವು ಕಾಬೆಟ್ಟು ವ್ಯಾಪ್ತಿಯ ಕಟ್ಟೆಮಾರು ಪ್ರದೇಶದಲ್ಲಿ 2.73 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿತ್ತು.
ನಂತರದ ವರ್ಷಗಳಲ್ಲಿ ನಿರ್ವಹಣೆಯ ಕೊರತೆಯಿಂದ ಇಡೀ ಪ್ರದೇಶ ವ್ಯಾಪ್ತಿಯಲ್ಲಿ ತ್ಯಾಜ್ಯ ನೀರು ಶೇಖರಣೆ ಗೊಂಡ ಪರಿಣಾಮವಾಗಿ ಫಲವತ್ತಾದ ಕೃಷಿ ಭೂಮಿ, ಕುಡಿಯುವ ನೀರಿನ ಬಾವಿಗಳೆಲ್ಲವೂ ಕಲುಷಿತಗೊಂಡಿತ್ತು. ಕಾಬೆಟ್ಟು ಆಸುಪಾಸಿನಲ್ಲಿ ದುರ್ನಾತ ಬೀರುತ್ತಾ ಸೊಳ್ಳೆ ಸಹಿತ ಸಾಂಕ್ರಾಮಿಕ ರೋಗಾಣುಗಳ ಅವಾಸ ತಾಣವಾಗಿ ಮಾರ್ಪಟ್ಟಿತ್ತು.
ಈ ಕುರಿತು ಹಲವು ಬಾರಿ ನಾಗರಿಕರು ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೂ ಮನವಿ ಪತ್ರ ಸಲ್ಲಿಸಿದ್ದರು.
ಇವೆಲ್ಲ ಸಮಸ್ಸೆಗಳಿಗೆ ಮುಕ್ತಿ ದೊರೆಯಿತ್ತೆಂದು ಭಾಸವಾಗುತ್ತಿದ್ದಂತೆ ಇದೀಗ ಅದೇ ಯೋಜನೆಯಿಂದ ಇನ್ನಷ್ಟು ಸಮಸ್ಸೆ ಎದುರಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top