ಕಾರ್ಕಳದಿಂದ ಕಾಪು ಶ್ರೀ ಹೊಸಮಾರಿಗುಡಿಗೆ ಹಸಿರುವಾಣಿ ಹೊರೆಕಾಣಿಕೆ

Picture of RB NEWS

RB NEWS

Bureau Report

ಕಾರ್ಕಳ : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಕಾರ್ಕಳದಿಂದ ಫೆ.23ರಂದು ಹಸಿರುವಾಣಿ ಹೊರೆಕಾಣಿಕೆ ಹೊರಡಲಿರುವುದು.

ಹಸಿರು ಹೊರೆಕಾಣಿಕೆಯನ್ನು ಕಾರ್ಕಳದ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಸಂಗ್ರಹಿಸಿಡಲಾಗುತ್ತದೆ. ಫೆ. 22 ಶನಿವಾರ ಸಂಜೆ 7.00 ಗಂಟೆಯ ಒಳಗೆ ತಲುಪಿಸಬಹುದು.

ಫೆ. 23 ಆದಿತ್ಯವಾರ ಅಪರಾಹ್ನ ಗಂಟೆ 1.30ಕ್ಕೆ ಕಾರ್ಕಳ ಅನಂತಶಯನ ದೇವಸ್ಥಾನದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ಹೊರಡುವುದು.

ಮಹಾ ಅನ್ನಸಂತರ್ಪಣೆಗೆ ಬೇಕಾಗುವ ಅಕ್ಕಿ (ಸ್ವಸ್ತಿಕ್ ಬ್ರಾಂಡ್), ಸಿಪ್ಪೆಯ ತೆಂಗಿನಕಾಯಿ, ಸೀಯಾಳ, ಸಕ್ಕರೆ, ಬೆಲ್ಲ, ತೆಂಗಿನ ಎಣ್ಣೆ, ನಂದಿನಿ ತುಪ್ಪ, ತೊಗರಿಬೇಳೆ (ಪಿಕಾಕ್ ಬ್ರಾಂಡ್), ಉದ್ದಿನಬೇಳೆ (ಪಿಕಾಕ್ ಬ್ರಾಂಡ್), ದವಸ ಧಾನ್ಯಗಳು, ಸಂಬಾರ ದಿನಸಿಗಳು, ತರಕಾರಿ, ಹಣ್ಣು ಹಂಪಲು, ಬಾಳೆಎಳೆ, ಹಾಳೆ ತಟ್ಟೆ ಹಾಗೂ ಶ್ರೀ ಕ್ಷೇತ್ರದಲ್ಲಿ ನಡೆಯುವ ಸತ್ಕರ್ಮಗಳಿಗೆ ವಿನಿಯೋಗವಾಗುವ ಅಡುಗೆ ಪರಿಕರ ಹಾಗೂ ಇನ್ನಿತರ ಪರಿಕರಗಳನ್ನು ನೀಡಬಹುದಾಗಿದೆ.

•

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top