ಕಾರ್ಕಳದಲ್ಲಿ ಯುನೈಟೆಡ್ ಟೊಯೋಟಾ ಶೋರೂಮ್ ಲೋಕಾರ್ಪಣೆ

Picture of RB NEWS

RB NEWS

Bureau Report

ಕಾರ್ಕಳ: ಆಧುನಿಕ ಕಾಲಘಟ್ಟಕ್ಕೆ ಅನುಗುಣವಾಗಿ ವಾಹನಗಳ ಬಳಕೆ ಅನಿವಾರ್ಯವಾಗಿದೆ. ವಾಹನದ ಶಕ್ತಿ, ವೇಗ, ಗುಣಮಟ್ಟ, ಆಧುನಿಕ ತಂತ್ರಜ್ಞಾನದಿoದ ತಯಾರುಗೊಳ್ಳುತ್ತಿರುವ ಟೊಯೋಟಾ ಕಂಪೆನಿಯ ಕಾರುಗಳು ಜನಮನದಲ್ಲಿ ಅಚ್ಚಾಗಿ ಉಳಿಯಲು ಕಾರಣವಾಗಿದೆ. ಹೆಚ್ಚುತ್ತಿರುವ ವಾಹನಗಳ ಪೈಕಿ ಟೊಯೋಟಾ ಸಂಸ್ಥೆಯ ವಾಹನಗಳು ಗಣನೀಯವಾಗುತ್ತಿರುವುದು ಗಮನಾರ್ಹ. ನಗರ ಪ್ರದೇಶಕ್ಕೆ ತೆರಳಿ ಕಾರುಗಳನ್ನು ಖರೀದಿಸುವ ಬದಲಾಗಿ ಗ್ರಾಮೀಣ ಪ್ರದೇಶಕ್ಕೂ ಆ ವ್ಯವಸ್ಥೆಯನ್ನು ವಿಸ್ತರಣೆ ಮಾಡಿದಾಗ ಗ್ರಾಹಕರಿಗೆ ಹೆಚ್ಚಿನ ರೀತಿಯಲ್ಲಿ ಪ್ರಯೋಜನವಾಗಲಿದೆ ಎಂದು ಉಜಿರೆಯ ಎಸ್‌ಡಿಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಮಂಗಳೂರು ಜಾಕಿ ರೆಡ್ ಎಫ್‌ಎಂ ರೆಡಿಯೋದ ಡಾ. ಸುವೀರ್ ಜೈನ್ ಹೇಳಿದರು.

ನಗರದ ಆನೆಕೆರೆ ಭವಾನಿ ಮಿಲ್ ಬಳಿಯಲ್ಲಿ ಯುನೈಟೆಡ್ ಟೊಯೋಟಾದ ಟಿಸ್ಪರ್ಶ ಶೋರೂಮ್ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಯುನೈಟೆಡ್ ಟೊಯೋಟಾ ಟಿಸ್ಪರ್ಶ ಶೋರೂಮ್ ಅನ್ನು ಉದ್ಯಮಿ ಗಣಪತಿ ಹೆಗ್ಡೆ ಉದ್ಘಾಟಿಸಿ ಮಾತನಾಡಿ, ಒಳ್ಳೆಯ ಉದ್ದೇಶಗಳೊಂದಿಗೆ ವ್ಯಾಪಾರ ಕ್ಷೇತ್ರದತ್ತ ಹೆಜ್ಜೆಯನಿಡಬೇಕು. ದೇವರ ದಯೆ, ಗುರು ಹಿರಿಯರ ಆಶೀರ್ವಾದದ ಜೊತೆಗೆ ಗ್ರಾಹಕರಿಗೆ ಸಂತೃಪ್ತಿ ಸಿಕ್ಕಾಗ ಹೆಚ್ಚಿನ ರೀತಿಯಲ್ಲಿ ಪ್ರಗತಿ ಹೊಂದಲು ಕಾರಣವಾಗುತ್ತದೆ. ಸ್ವರ್ಧಾತ್ಮಕ ಯುಗದಲ್ಲಿ ಆರೂರು ಕುಟುಂಬವು ಗ್ರಾಹಕರ ವಿಶ್ವಾಸಗಳಿಸಿಸುತ್ತಿರುವುದು ಶೋರೂಮ್‌ಗಳ ಸಂಖ್ಯೆ ವೃದ್ಧಿಗೆ ಕಾರಣವಾಗಿದೆ ಎಂದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯುನೈಟೆಡ್ ಟೊಯೋಟಾ ಡೀಲರ್ ಆಗಿರುವ ಆರೂರು ರಾಮ್ ಗೋಪಾಲ ರಾವ್ ಮಾತನಾಡಿ, ಸಂಸ್ಥೆ ಸಾಗಿ ಬಂದ ಬಗ್ಗೆ ಮಾಹಿತಿ ನೀಡಿ ಸಿಬ್ಬಂದಿಗಳ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿನಾಯಕ ಹೆಗ್ಡೆ, ಸಂಸ್ಥೆಯ ಸಿ ಇ ಒ ರಮೇಶ್ ಪ್ರಭು ಉಪಸ್ಥಿತರಿದ್ದರು.

ಕಾರ್ತಿಕ್ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top