ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮತ ಕೇಳುವುದರ ಪರವಾಗಿ ಕಾರ್ಕಳ ಬಿಜೆಪಿಯವರಿಂದ ಭಾರೀ ಸಂಖ್ಯೆಯಲ್ಲಿ ಕಾರು ರ್ಯಾಲಿ ನಡೆಯಿತು.
ಹೆಬ್ರಿವರೆಗಿನ ರ್ಯಾಲಿ ಯನ್ನು ಆಯೋಜಿಸಿದ್ದು ಅಲ್ಲಿ ತಮಿಳುನಾಡು ಬಿಜೆಪಿ ನಾಯಕ ಅಣ್ಣಾ ಮಲೈಯವರ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.





ಕಾರ್ಕಳ ಸ್ವರಾಜ್ಯ ಮೈದಾನ ಕಡೆಯಿಂದ ರ್ಯಾಲಿಯ ಪ್ರಾರಂಭವಾಯಿತು.ಮಾಜಿ ಸಚಿವ,ಹಾಲಿ ಶಾಸಕ ವಿ. ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಪಕ್ಷದ ಹಿರಿಯ ಕಿರಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
ರ್ಯಾಲಿ ಆರಂಭಿಸುವ ಮುನ್ನ ನೆರೆದಿರುವವರಲ್ಲ್ಲಿಗೇರು ನಿಗಮ ಅಭಿವೃದ್ಧಿಯ ಮಾಜಿ ಅಧ್ಯಕ್ಷ,ಹಿರಿಯ ನ್ಯಾಯವಾದಿ ಮಣಿರಾಜ ಶೆಟ್ಟಿ,ನಿಕಟಪೂರ್ವ ಕ್ಷೇತ್ರೀಯ ಅಧ್ಯಕ್ಷ ಮಹಾವೀರ ಹೆಗ್ಡೆ, ಹಾಲಿ ಕ್ಷೇತ್ರೀಯ ಅಧ್ಯಕ್ಷ ನವೀನ್ ನಾಯಕ್ ರಾಜ್ಯ ಯುವ ಮೋರ್ಚದ ಪ್ರಧಾನ ಕಾರ್ಯದರ್ಶಿ ವಿಖ್ಯಾತ ಶೆಟ್ಟಿ,ರವೀಂದ್ರ ದೇವಾಡಿಗ,ಸತೀಶ್ ಮುಟ್ಲುಪಾಡಿ, ಮುಂತಾದ ಹಲವು ಮಂದಿ ಪ್ರಮುಖರು ಹಾಜರಿದ್ದರು.
ನಮ್ಮ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ದಾಖಲೆಯ ಅಂತರದ ಮತ ಪಡೆದು ಗೆಲ್ಲಲಿದ್ದಾರೆ.ಮೋದಿಯವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡುವುದಕ್ಕೆ ಜನತೆ ಕಾತರರಾಗಿದ್ದಾರೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.


























