[t4b-ticker]

ಕಾರುಗಳೆರಡು ಮುಖಾಮುಖಿ ಢಿಕ್ಕಿ

Picture of RB NEWS

RB NEWS

Bureau Report

ಹೆಬ್ರಿ : ಕಾರುಗಳೆರಡು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮವಾಗಿ ಪ್ರಯಾಣಿಕರಿಬ್ಬರು ಗಾಯಗೊಂಡ ಘಟನೆ ಹೆಬ್ರಿ ಸಮೀಪದ ಮುನಿಯಾಲು ಪೇಟೆಯಲ್ಲಿ ಗುರುವಾರ ಸಂಜೆ ನಡೆದಿದೆ

ಚಟ್ಕಲ್ ಪಾದೆಯಿಂದ ಮುನಿಯಾಲು ಕಡೆಗೆ ಸಾಗುತಿದ್ದ ಕಾರು, ಕಾರ್ಕಳ ದಿಂದ ಹೆಬ್ರಿ ಕಡೆಗೆ ಸಾಗುತಿದ್ದ ಕಾರು ಪರಸ್ಪರ ಢಿಕ್ಕಿ ಹೊಡೆದಿತ್ತು.

ಕಾರಿನ ಚಾಲಕ ಜಗದೀಶ್ ಆಚಾರ್ ಹಾಗೂ ಮಹಿಳೆಯೋರ್ವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪಘಾತದ ತೀವ್ರತೆಗೆ ಕಾರಿನ ಮುಂಭಾಗವು ಪೂರ್ಣ ಪ್ರಮಾಣದಲ್ಲಿ ಜಖಂ ಉಂಡಾಗಿದೆ.

ಒಂದೇ ತಿಂಗಳಲ್ಲಿ ಎಂಟು ಅಪಘಾತಗಳು:

ಕಾಡುಹೊಳೆ ಮುನಿಯಾಲು ಚಟ್ಕಲ್ ಪಾದೆ ಮುಖ್ಯ ರಸ್ತೆಯು ಚತುಷ್ಪರ್ಥ ರಸ್ತೆಯಾಗಿ ಮೇಲ್ದಾರ್ಜೆಗೆ ಏರಿಸಲಾಗುತ್ತಿದೆ.

ಕಳೆದ ಒಂದುವರೆ ವರ್ಷಗಳಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದರೂ ಇನ್ನೂ ಪೂರ್ಣ ಗೊಂಡಿಲ್ಲ.

ಕಾಮಗಾರಿ ಇಕ್ಕೆಲಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೂಚನಾ ಫಲಕ ಗಳನ್ನು ಅಳವಡಿಸಿಲ್ಲ ಪರಿಣಾಮವಾಗಿ ಸರಣಿ ಅಪಘಾತಗಳು ಘಟಿಸುತ್ತಾ ಬಂದಿದೆ.

ವೇಗವಾಗಿ ಸಾಗುವ ವಾಹನ ದನವೊಂದು ಢಿಕ್ಕಿ ಹೊಡೆದಿದ್ದು ಅದರ ಸಾವಿಗೂ ಕಾರಣವಾಗಿತ್ತು.

ಕಳೆದ ಒಂದೇ ತಿಂಗಳ ಅವಧಿಯಲ್ಲಿ ಎಂಟು ಅಪಘಾತಗಳು ನಡೆದಿದೆ.

ಕರ್ನಾಟಕ ಲೋಕೋಪಯೋಗಿ ಇಲಾಖೆ ಕಾರ್ಕಳ ವಿಭಾಗದ ಅಭಿಯಂತರರು ಇದರತ್ತ ಗಮನ ಹರಿಸಬೇಕು.

ಕಾಮಗಾರಿ ಟೆಂಡರ್ ವಹಿಸಿಕೊಂಡ ಸಂದರ್ಭದಲ್ಲಿ ಪಾಲಿಸಬೇಕಾದ ಶರತ್ತುಗಳನ್ನು ಪರಿಪಾಲಿಸಬೇಕಾದ ಹೊಣೆಗಾರಿಕೆ ಗುತ್ತಿಗೆ ದಾರದಾಗಿದೆ.

ಇದರ ಹಿನ್ನಲ್ಲೇಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುವು ಆಗುವ ರೀತಿಯಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸೂಚನಾ ಫಲಕಗಳ ಬೋರ್ಡ್ ಅಳವಡಿಸುವ ಜವಾಬ್ದಾರಿ ಗುತ್ತಿಗೆದಾರರದಾಗಿದೆ ಎಂಬುವುದನ್ನು ಮರೆಯಬಾರದು.
..

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top