ಕಾರ್ಕಳ : ಸಾಣೂರು ಕೋಳಿ ಫಾರಂ ಹತ್ತಿರ ಓಮಿನಿ ಮತ್ತು ಆಲ್ಟೊ ಕಾರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಒಬ್ಬನ ಸ್ಥಿತಿ ಗಂಭೀರವಾಗಿದೆ. ಇವರೆಲ್ಲರೂ ಮೂಡಬಿದಿರೆ ಯವರೆಂದು ತಿಳಿದುಬಂದಿದೆ.
ಮೂಡುಬಿದಿರೆ ಯಿಂದ ಕಾರ್ಕಳದ ರೆಸಾಟ್ ೯ ಕಡೆಗೆ ಬರುತ್ತಿದ್ದ ಮಾರುತಿ ಕಾರು ಹಾಗೂ ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಹೋಗುತ್ತಿದ್ದ ಆಲ್ಟೋ ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿತ್ತು.

ಅಪಘಾತದ ತೀವ್ರತೆಗೆ ಮಾರುತಿ ಒಮ್ಮಿ ಕಾರಿನಲ್ಲಿ ಇದ್ದ . ಆಫ್ರಿದ್ ಅನ್ವಿಸ್, ಅಶ್ವಿನ್, ಅಗ್ಮ ಗಾಯಗೊಂಡವರಾಗಿದ್ದಾರೆ. ಇವರಲ್ಲಿ ಅಪ್ರಾಪ್ತರು ಒಳಗೊಂಡಿದ್ದರು.
ಕ್ರೇನ್ ಮೂಲಕ ಆಫ್ರಿದ್ ನನ್ನು ಕಾರಿನಿಂದ ಹೊರತೆಗೆಯಲು ಸುಮಾರು ಮುಕ್ಕಾಲು ಗಂಟೆಗಳಾಗಿತ್ತು. ಆತನ ಸ್ಥಿತಿ ಗಂಭೀರವಾಗಿದ್ದು, ಕಾರ್ಕಳದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ 10 ನಿಮಿಷಗಳೊಳಗಾಗಿ 108 ಅಂಬುಲೆನ್ಸ್ ಘಟನಾ ಸ್ಥಳಕ್ಕೆ ಅಗಮಿಸಿದೆಯಾದರೂ, ಗಾಯಾಳು ವಾಹನದೊಳಗೆ ಸಿಲುಕಿಕೊಂಡಿರುವುದರಿಂದ ಆಸ್ಪತ್ರೆಗೆ ಕರೆದೊಯ್ಯಲು ತಡವಾಗಿತ್ತು.
108 ಅಂಬುಲೆನ್ಸ್ ಪೈಲೆಟ್ ಸಿಬ್ಬಂದಿ ಕೊಟ್ರಪ್ಪ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.














