ಕಾರಾಗೃಹದ ಮೇಲೆ ಪೊಲೀಸರು ದಾಳಿ : ನಿಷೇಧಿತ ವಸ್ತುಗಳು ವಶ
ಮಂಗಳೂರು : ನಗರದ ಕಾರಾಗೃಹದ ಮೇಲೆ ಮುಂಜಾನೆ ಪೊಲೀಸರು ದಾಳಿ ನಡೆಸಿದ್ದು, ಮೊಬೈಲ್ ಸೇರಿ ಹಲವು ನಿಷೇಧಿತ ವಸ್ತುಗಳು ವಶಪಡಿಸಿಕೊಂಡಿದ್ದಾರೆ.

ಕೋಡಿಯಾಲ್ ಬೈಲ್ ನಲ್ಲಿರುವ ಜೈಲಿನಲ್ಲಿರುವ ಇಬ್ಬರು ಡಿಸಿಪಿ, ಮೂವರು ಎಸಿಪಿ, 15 ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಸುಮಾರು 150 ಮಂದಿ ಸಿಬ್ಬಂದಿ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಲಾಗಿದೆ.

ಈ ವೇಳೆ ಹಲವು ವಿಚಾರಣಾಧೀನ ಕೈದಿಗಳ ಬಳಿ 25 ಮೊಬೈಲ್ ಫೋನ್ಗಳು, ಒಂದು ಬ್ಲೂಟೂತ್ ಸಾಧನ, 5 ಇಯರ್ಫೋನ್, ಒಂದು ಪೆನ್ ಡ್ರೈವ್, 5 ಚಾರ್ಜರ್, ಒಂದು ಜತೆ ಕತ್ತರಿ, 3 ಕೇಬಲ್, ಗಾಂಜಾ ಪ್ಯಾಕೆಟ್ಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.














