


ಕಾಪು: ಕೊರಂಟಿಕಟ್ಟೆ ನವೀಕೃತ ಮಸೀದಿ ಉದ್ಘಾಟನೆ; ಸೌಹಾರ್ದ ಸಂಗಮ

ಕಾಪು : ಕಳತ್ತೂರು ಕೊರಂಟಿಕಟ್ಟೆಯಲ್ಲಿ ನವೀಕೃತಗೊಂಡ ಮಸ್ಜಿದ್ ಇ ನೂರು ಮಸೀದಿ ಉದ್ಘಾಟನೆಯ ಪ್ರಯುಕ್ತ ರವಿವಾರ ಮಸೀದಿ ವಠಾರದಲ್ಲಿ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮಜೂರು ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಅಬ್ದುಲ್ ರಶೀದ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಮಸೀದಿ ಅಧ್ಯಕ್ಷ ಬಿ.ಎ. ಫಕ್ರುದ್ದೀನ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ನೌಫಲ್ ಸಖಾಫಿ ದುವಾ ನೆರವೇರಿಸಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿದರು. ವಕೀಲ ಹಂಝತ್ ಹೆಜಮಾಡಿ ಸೌಹಾರ್ದ ಸಂದೇಶ ನೀಡಿದರು.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಝ್ಮತ್ ಅಲಿ, ಪಿಡಬ್ಲ್ಯುಡಿ ಮಂಗಳೂರು ವಿಭಾಗದ ಅಹಮದ್ ನೌಝಲ್, ಕಳತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಆಚಾರ್ಯ, ಉದ್ಯಮಿಗಳಾದ ನಿತ್ಯಾನಂದ ಫೈಯರ್, ಶ್ರೀಧರ ಭಟ್ ಚಂದ್ರನಗರ, ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರವೀಣ್ ಪೈ ಗುರ್ಮೆ, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಶರ್ಫುದ್ದೀನ್ ಶೇಖ್, ಗ್ರಾಪಂ ಸದಸ್ಯ ಸ್ಟ್ಯಾನ್ಲಿ ಕೋರ್ದ ಮುಖ್ಯ ಅತಿಥಿಗಳಾಗಿದ್ದರು.


ಈ ಸಂದರ್ಭ ಕಾಪು ಬೀಚ್ನಲ್ಲಿ ಹಲವರ ಜೀವ ರಕ್ಷಿಸಿದ ಮೊಗವೀರ ಸಮುದಾಯದ ಏಳು ಮಂದಿಯನ್ನು, ಸಮಾಜ ಸೇವಕ ಜಲಾಲುದ್ದೀನ್ ಉಚ್ಚಿಲ ಮತ್ತು ತಂಡ, ಪತ್ರಕರ್ತರಾದ ನಝೀರ್ ಪೊಲ್ಯ ಹಾಗೂ ಖಲೀಲ್ ಕಾರ್ಕಳ, ಹಿರಿಯ ಖತೀಬ್ ಅಹ್ಮದ್ ಮುಸ್ಲಿಯಾರ್, ಲೈನ್ಮೆನ್ಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಎಚ್.ಆರ್. ಹಸನ್, ಅಬ್ದುಲ್ ರಝಾಕ್ ಖಾಸಿಮಿ, ಅಲಿಯಬ್ಬ ಇಬ್ರಾಹಿಂ ಕೊರಂಟಿಕಟ್ಟೆ, ಅಹಮದ್ ಶಬೀರ್ ಸಖಾಫಿ, ಮುಹಮ್ಮದ್ ಮುಸ್ತಫಾ ಸಖಾಫಿ, ಮುಹಿಯುದ್ದೀನ್ ಸಖಾಫಿ, ಯಾಕೂಬ್ ಸಅದಿ, ಸಾದಿಕ್ ದೀನರ್ ಕಾಪು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಮಸೀದಿ ಕಾರ್ಯದರ್ಶಿ ಇಮ್ರಾನ್ ಬಶೀರ್ ಸ್ವಾಗತಿಸಿ, ರಝಾಕ್ ಕೊರಂಟಿಕಟ್ಟೆ ವಂದಿಸಿದರು. ಆಸೀಫ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.
ಮಸೀದಿ ಉದ್ಘಾಟನೆ:
ನವೀಕೃತ ಮಸೀದಿಯ ಉದ್ಘಾಟನೆಯನ್ನು ಶುಕ್ರವಾರ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ನಾಯಿಬ್ ಖಾಝಿ ಅಬ್ದುಲ್ ರಹಿಮಾನ್ ಮದನಿ ನೆರವೇರಿಸಿದರು. ಈ ವೇಳೆ ಮಸೀದಿ ಅಧ್ಯಕ್ಷ ಬಿ.ಎ. ಫಕ್ರುದ್ದೀನ್ ಅಲಿ, ಗೌರವಾಧ್ಯಕ್ಷ ಅಲ್ಹಾಜ್ ಅಬ್ದುಲ್ ಕರೀಂ, ಖತೀಬ್ ನೌಫಲ್ ಸಖಾಫಿ ಸೇರಿದಂತೆ ವಿವಿಧ ಮಸೀದಿಗಳ ಖತೀಬ್ಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.







































