ಕಾನೂನಿನಲ್ಲಿರುವ ಸವಲತ್ತುಗಳ ಅರಿವು ಹಿರಿಯ ನಾಗರಿಕರಿಗೆ ಅಗತ್ಯ -ನ್ಯಾಯಾಧೀಶೆ ಕೋಮಲ ಆರ್‌.ಸಿ

Picture of RB NEWS

RB NEWS

Bureau Report

ಕಾರ್ಕಳ : ಹಿರಿಯ ನಾಗರಿಕರಿಗೆ ಕಾನೂನಲ್ಲಿರುವ ಸವಲತ್ತುಗಳ ಬಗ್ಗೆ ಅರಿವಿರಬೇಕು ತಮ್ಮ ಇಳಿ ಬಯಸಿನಲ್ಲಿ ನೆಮ್ಮದಿಯಿಂದ ಬದುಕಲು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು .ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶೆ ಕೋಮಲ ಆರ್‌.ಸಿ ಇವರು ಹೇಳಿದರು .

ಅವರು ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ) ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ ಮತ್ತು ಕಾರ್ಕಳ ತಾಲೂಕು ಹಿರಿಯ ನಾಗರಿಕರ ಸಂಘ(ರಿ) ಇವರ ಸಂಯುಕ್ತ ಆಶ್ರಯದಲ್ಲಿ ಭಂಡಾರಿ ಸಮಾಜ ಸಂಘ(ರಿ) ಕಾರ್ಕಳ, ರೋಟರಿ ಸಮುದಾಯದಳ ಕಾಳಿಕಾಂಬ, ರೋಟರಿ ಆನ್ಸ್ ಕ್ಲಬ್ ಕಾರ್ಕಳ, ಇವರ ಸಹಾಯಯೋಗದೊಂದಿಗೆ ನಡೆದ “ವಿಶ್ವ ಹಿರಿಯ ನಾಗರಿಕರ ದಿನಾಚರಣೆ” ಅಂಗವಾಗಿ “ಕಾನೂನು ಅರಿವು ಮತ್ತು ಮಾಹಿತಿ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು .

ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ಇಕ್ಬಾಲ್ ಅಹಮದ್ ಸ್ವಾಗತಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಕಾರ್ಕಳದ ನ್ಯಾಯವಾದಿ ಶುಭ, ಪೋಷಕರು ಮಕ್ಕಳಿಗೆ ವಿದ್ಯೆಯನ್ನು ಕೊಡಿಸುವುದರ ಜೊತೆಗೆ ಸಂಸ್ಕಾರವನ್ನು ಕಲಿಸಿದಲ್ಲಿ ಹಿರಿಯರಾದಾಗ ಮಕ್ಕಳು ಪ್ರೀತಿಯಿಂದ ಆರೈಕೆ ಮಾಡಬಲ್ಲರು.ತನ್ನ ಮಕ್ಕಳಿಂದ, ಅಥವಾ ಇತರರಿಂದ ತೊಂದರೆಗಳಾದಾಗ ಕಾನೂನಿನ ಸವಲತ್ತುಗಳ ಅರಿವಿರಬೇಕು.ತಾಲೂಕು ಕಾನೂನು ಸೇವೆಗಳ ಸಮಿತಿಯ ಸಲಹೆ ಸಹಕಾರ ಪಡೆದುಕೊಳ್ಳಬಹುದೆಂದು ಎಂದರು .

ಮುಖ್ಯ ಅತಿಥಿಯಾಗಿ ಕಾರ್ಕಳ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಕೆ. ವಾಸುದೇವ್ ರಾವ್ , ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಶೇಖರ್ ಹೆಚ್.ಆನ್ಸ್ ಕ್ಲಬ್ ಅಧ್ಯಕ್ಷೆ ವಿನಯ ಶೆಟ್ಟಿ, ರೋಟರಿ ಸಮುದಾಯದಳ ಅಧ್ಯಕ್ಷೆ ರಮಾ ಉಪಸ್ಥಿತರಿದ್ದರು.

ನ್ಯಾಯವಾದಿಗಳ ಸಂಘದ ನಿಕಟಪೂರ್ವ ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್ ನಿರೂಪಿಸಿದರು. ವಸಂತ್ ಎಂ. ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top