ಕಾಂಗ್ರೆಸ್ ಪ್ರತಿಭಟನೆ ವೇಳೆಗೆ ಬಸ್ಸಿಗೆ ತೂರಿಬಂದ ಕಲ್ಲು; ಗಾಜು ಪುಡಿ, ಪುಡಿ : ರಾಜಕೀಯ ಇಂಬು ಪಡೆದ ಪ್ರಕರಣ






ಮಂಗಳೂರು: ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆಗೆ ಕೆಲ ದುಷ್ಕರ್ಮಿಗಳು ಖಾಸಗಿ ಬಸ್ಸೊಂದಕ್ಕೆ ಕಲ್ಲು ತೂರಾಟ ನಡೆಸಿದ ಪರಿಣಾಮ ಬಸ್ದಿನ ಗಾಜು ಪುಡಿಯಾಗಿ, ಪ್ರಯಾಣಿಕರೊಬ್ಬರು ಗಾಯಗೊಂಡಿರುವ ಘಟನೆ ಮಂಗಳೂರು ನಗರದ ಲಾಲ್ ಬಾಗ್ ಎಂಬಲ್ಲಿ ನಡೆದಿದೆ.
ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ನಿಂದ ಜೋಕಟ್ಟೆಗೆ ಹೋಗುವ ‘ಮೌಲಾ’ 2 ಸಿ ಸಿಟಿ ಬಸ್ ಮೇಲೆ ಕಲ್ಲು ತೂರಾಟವಾಗಿತ್ತು.
ಆ ಬಸ್ಸಿನಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿ ಮಾತ್ರ ಪ್ರಯಾಣಿಕರು ಇದ್ದರು. ಕಲ್ಲು ತೂರಾಟದ ವೇಳೆಗೆ ಬಸ್ಸು ಚಾಲಕನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ಮಹಿಳೆ ಗಾಯವಾಗಿದೆ.
ಬಸ್ಸಿಗೆ ಕಲ್ಲು ತೂರಾಟ ಪ್ರಕರಣ ರಾಜಕೀಯ ಹೊಸ ತಿರುವು ಪಡೆದುಕೊಂದ್ದು, ನಾಲ್ವರು ದುಷ್ಕರ್ಮಿಗಳು ಉದ್ದೇಶ ಪೂರಕವಾಗಿಯೇ ಕೃತ್ಯ ನಡೆಸಿದ್ದರೆನ್ನಲಾಗಿದೆ. ಘಟನೆಯಲ್ಲಿ ಹಾನಿಗೀಡಾದ ಬಸ್ ಮಾಲಕ ನೌಫಾಲ್ ಎಂಬ ಬಿಜೆಪಿ ನಾಯಕ ಎಂಬುವುದು ಗಮನಾರ್ಹ.





















