ಕಸದಿಂದ ರಸ : ಕಲಾಕೃತಿಯಾಗಿ ಮೂಡಿಬಂದ ತ್ಯಾಜ್ಯ ಪರಿಕರ

Picture of RB NEWS

RB NEWS

Bureau Report

ಕಾರ್ಕಳ ಪುರಸಭೆ ವತಿಯಿಂದ ಆಯೋಜಿಸಲಾಗಿದ್ದ ಕಸದಿಂದ ರಸ ತ್ಯಾಜ್ಯ ಕಲಾ ಪ್ರದರ್ಶನದಲ್ಲಿ ಜ್ಯೋತಿ ಅವರು ಸಿದ್ಧಪಡಿಸಲಾಗಿದ್ದ ಕಲಾಕೃತಿ ಮೆಚ್ಚುಗೆಗೆ ಪಾತ್ರವಾಗಿದೆ.

ಇವರಿಗೆ ಪುರಸಭೆಯ ಪರಿಸರ ಅಭಿಯಂತರು ಜ್ಯೋತೀಶ್ವರಿ ಅಭಿನಂದನಾ ಪತ್ರ ನೀಡಿ ಗೌರವಿಸಿದರು.

ದಿನ ನಿತ್ಯ ಉಪಯೋಗಿಸಿ ಬಿಸಾಡುವ ವಸ್ತುಗಳಿಂದ ಯಾವ ರೀತಿ ಸುಂದರವಾದ ಆಕೃತಿ ಯನ್ನು ಮಾಡಬಹುದು, ಎಂಬುವುದನ್ನು ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ತೋರಿಸಿದರು.

ಪರಿಸರ ಸಂಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ ಎಂಬುವುದು ಇದರ ಉದ್ದೇಶವಾಗಿದೆ.

ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಆರೋಗ್ಯಾಧಿಕಾರಿ ಲೈಲಾ ಥೋಮಸ್ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top