ಕಳೆದುಕೊಳ್ಳದಿರಿ ಆತ್ಮಸ್ಥೈರ್ಯ – ಡಾ. ಮಾಲತಿ ಪೈ
ಆತ್ಮಹತ್ಯೆಯ ಪ್ರಕರಣಗಳನ್ನು ವಿಶ್ಲೇಷಿಸಿದಾಗ ಕಾರಣಗಳು ಭಿನ್ನವಾಗಿರುವುದು ಕಂಡು ಬರುತ್ತಿದೆ. ಆದರೆ ಎಲ್ಲ ಕೃತ್ಯಗಳಿಗೆ ಸಾಮಾನ್ಯವಾದ ಒಂದೇ ಕಾರಣ ಆತ್ಮಸ್ಥೈರ್ಯ, ಬದುಕಿನ ಭವಿಷ್ಯದ ಮೇಲಿನ ಭರವಸೆ ಬತ್ತಿ ಹೋಗಿರುವುದು. ಎಲ್ಲ ಸಮಸ್ಯೆಗಳಿಗೂ ಒಂದಲ್ಲೊಂದು ರೀತಿಯ ಪರಿಹಾರ ಇದ್ದೇ ಇದೆ. ಆತ್ಮಹತ್ಯೆ ಯಾವುದೇ ಸಮಸ್ಯೆಗೂ ಪರಿಹಾರವಲ್ಲ.
ಆತ್ಮಸ್ಥೈರ್ಯ ಕಳೆದುಕೊಳ್ಳದಿರಿ ಮಗು, ಪತ್ನಿಯನ್ನುಕೊಂದು ಆತ್ಮಹತ್ಯೆ, ಹುಟ್ಟಿದ ವಾರದೊಳಗೆ ಮಗು ಮೃತಪಟ್ಟ ಬಳಿಕ ತಾಯಿ ಆತ್ಮಹತ್ಯೆ, ಯಾರೋ ಬ್ಲ್ಯಾಕ್ಮೇಲ್ ಮಾಡಿ ಕಿರುಕುಳ ನೀಡುತ್ತಿದ್ದಾರೆಂದು ಉದ್ಯಮಿ ಆತ್ಮಹತ್ಯೆ, ಮಗುವಿನೊಂದಿಗೆ ಕಾರ್ಮಿಕ ಆತ್ಮಹತ್ಯೆಗೆ ಯತ್ನ, ನದಿಗೆ ಹಾರಿ ಯುವಕ ಆತ್ಮಹತ್ಯೆ…
ಇವು ಮಂಗಳೂರು , ಉಡುಪಿ ಹಾಗೂ ಆಸುಪಾಸಿನಲ್ಲಿ ಒಂದೂವರೆ ತಿಂಗಳೊಳಗೆ ನಡೆದಿರುವ ದುರಂತ ಘಟನೆಗಳಲ್ಲಿ ಕೆಲವು. ಕೌಟುಂಬಿಕ ಕಲಹ, ಬ್ಲ್ಯಾಕ್ಮೇಲ್ , ಆರ್ಥಿಕ ಸಂಕಷ್ಟ, ಅನಾರೋಗ್ಯ…ಹೀಗೆ ಕಾರಣಗಳು ಹಲವು. ಆದರೆ ಇವೆಲ್ಲವೂ ಪರಿಹಾರವಿಲ್ಲದ ಸಮಸ್ಯೆಗಳೇನಲ್ಲ. ಸಮಾಜದಲ್ಲಿ ಆತಂಕದ ಛಾಯೆ ಮೂಡಿಸುತ್ತಿರುವ “ಆತ್ಮಹತ್ಯೆ’ಗೆ ಸಮಾಜವೇ ಕಡಿವಾಣ ಹಾಕಬೇಕಿದೆ. ಹೊಸ ಬದುಕಿನ, ಹೊಸ ಬೆಳಕಿನ ಭರವಸೆಯ ಮೇಲೆ ಹೊಸಜೀವನ ಕಟ್ಟುವಂತಾಗಬೇಕಿದೆ.
ಕಳೆದ ಶುಕ್ರವಾರ ಮೂಲ್ಕಿ ಠಾಣೆ ವ್ಯಾಪ್ತಿಯ ಪಕ್ಷಿಕೆರೆಯಲ್ಲಿ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿ ಕೊಂಡಿದ್ದು, ಅವರ ಮನೆಯಲ್ಲಿ ಪತ್ನಿ, ಪುತ್ರ ಕೊಲೆಯಾಗಿದ್ದರು. ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎನ್ನಲಾಗುತ್ತಿದೆ.
ಅ.6ರಂದು ಉದ್ಯಮಿ ಮಮ್ತಾಜ್ ಅಲಿ ಕೂಳೂರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಲ್ಯಾಕ್ವೆುàಲ್, ಕಿರುಕುಳವೇ ಅವರ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ರವಿವಾರ ತನ್ನ ಎರಡೂವರೆ ವರ್ಷದ ಮಗನೊಂದಿಗೆ ಗುರುಪುರ ಸೇತುವೆ ಮೇಲೇರಿದ ಕಾರ್ಮಿಕ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ದಾಗ ಸಾರ್ವಜನಿಕರು ರಕ್ಷಿಸಿದ್ದಾರೆ. ಕಳೆದ ತಿಂಗಳು ಯುವಕನೋರ್ವ ಗುರುಪುರ ನದಿಗೆ ಹಾರಿ ಪ್ರಾಣಬಿಟ್ಟಿದ್ದ.
ಸೋಮವಾರದಂದು ನಗರದ ಲೇಡಿ ಗೋಷನ್ ಆಸ್ಪತ್ರೆಯ ಕಟ್ಟಡ ದಿಂದ ಹಾರಿದ ಕಾರ್ಕಳ ಮೂಲದ 28 ವರ್ಷದ ಬಾಣಂತಿ ಯೋರ್ವರು ಪ್ರಾಣ ತ್ಯಜಿಸಿದ್ದಾರೆ. ಇವರ ಹಸುಗೂಸು ಒಂದು ವಾರದ ಹಿಂದೆ ಮೃತಪಟ್ಟಿತ್ತು. ನ.6ರಂದು ಕಾರ್ಕಳ ಮಿಯ್ಯಾರಿನ 29 ವರ್ಷ ವಯಸ್ಸಿನ ಶಿಕ್ಷಕಿಯೋರ್ವರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಗುರುವಾರ ಕಡೆಕಾರು ಪಡುಕರೆಯ ವ್ಯಕ್ತಿಯೋರ್ವರು, ನ.7ರಿಂದ ನ.10ರ ನಡುವೆ ಉಪ್ಪೂರು ಕೊಳಲಗಿರಿಯ ಓರ್ವರು, ನ.3ರಂದು ಮಣಿಪಾಲದ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿ ಕೊಂಡಿದ್ದರು. ನ.2ರಂದು ಲಾಯಿಲ ಕುಂಟಿನಿಯ 26 ವರ್ಷದ ಯುವಕನೋರ್ವ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಜಿಲ್ಲೆಯ ವಿವಿಧೆಡೆ ಇನ್ನೂ ಹಲವು ಆತ್ಮಹತ್ಯೆ ಘಟನೆಗಳು ವರದಿಯಾಗುತ್ತಲೇ ಇವೆ.
ದಿನದ 24 ಗಂಟೆಗಳಲ್ಲಿ 24 ನಿಮಿಷವಾದರೂ ಯೋಗ ಪ್ರಾಣಾಯಾಮ ,ಧ್ಯಾನ, ಜಪತಪ
ಸೈಕ್ಲಿಂಗ್ ,ವಾಕಿಂಗ್ ,ಸತ್ಸಂಗ ಪ್ರಕೃತಿಯಲ್ಲಿ ವಾಯುವಿಹಾರ ಇವೆಲ್ಲದರ ಅಭ್ಯಾಸವು ನಮ್ಮನ್ನು ಮಾನಸಿಕವಾಗಿ ಹಾಗೂ ದೈಹಿಕ ಶಾರೀರಿಕ ಬೌದ್ಧಿಕವಾಗಿ ನೈತಿಕ ಸ್ಥೈರ್ಯವನ್ನು ತುಂಬುತ್ತದೆ.
ಹೆಚ್ಚು ಹೊತ್ತು ಮೊಬೈಲ್ ಬಳಕೆ ಮನಸ್ಸು ಕೆರಳಿಸುವ ಧಾರಾವಾಹಿಗಳು ಕ್ರೈಂ ಸ್ಟೋರಿ ಇವೆಲ್ಲವೂ ಮನಸ್ಸಿನ ಪಟಲದಲ್ಲಿ ಅಚ್ಚೊ ತ್ತಿಕೊಂಡು ಮನಸ್ಸು ಜರ್ಜರಿತವಾಗುತ್ತದೆ.
ಮಾನವ ಸಂಪನ್ಮೂಲದ ನಷ್ಟ ಭರಿಸಲು ಅಸಾಧ್ಯವಾಗುತ್ತದೆ.
ಆದ್ದರಿಂದ ಊರಿಗೆ ಒಂದು ಶಾಲೆ, ಊರಿಗೊಂದು ಗ್ರಂಥಾಲಯ, ಊರಿಗೊಂದು ವಾಚನಾಲಯ ಇದ್ದಂತೆ ಊರಿಗೊಂದು ಯೋಗಾಶಾಲೆಯನ್ನು ತೆರೆಯಬೇಕಾದ ಅನಿವಾರ್ಯ ಬೇಕೆಂದೆನಿಸುವುದಿಲ್ಲವೇ?
ಆತ್ಮಹತ್ಯೆ ತಡೆಯಲು ಸಾಧ್ಯ ಎನ್ನುತ್ತಾರೆ ತಜ್ಞರು
ಮಾನಸಿಕವಾಗಿ ಆರೋಗ್ಯದಿಂದ ಇದ್ದ ಕೆಲವರೂ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಾರೆ. ಯಾರಾದರೂ ಆತ್ಮಹತ್ಯೆ ಯೋಚನೆ ಯಲ್ಲಿದ್ದಾರೆ ಎಂದು ಗೊತ್ತಾದರೆ ಕೂಡಲೇ ಅವರನ್ನು ಮನೋರೋಗ ತಜ್ಞರ ಬಳಿಗೆ ಕರೆದೊಯ್ಯಬೇಕು. ಅಗತ್ಯ ಇರುವವರಿಗೆ ಶಾಕ್ ಥೆರೆ ಪಿ(ಇಸಿಟಿ) ಕೂಡ ನೀಡಲಾಗುತ್ತದೆ. ಮಾತು ಕಡಿಮೆ, ಬೆರೆಯುವಿಕೆ ಕಡಿಮೆ, ಹಿಂದಿನಿಂದ ಮಾಡಿಕೊಂಡು ಬಂದ ಚಟುವಟಿಕೆ ಕಡಿಮೆ ಮಾಡುವುದು, ಈ ಹಿಂದೊಮ್ಮೆ ಆತ್ಮಹತ್ಯೆಗೆ ಪ್ರಯತ್ನ ಮಾಡಿರುವುದು ಇತ್ಯಾದಿ ಗಮನಕ್ಕೆ ಬಂದರೆ ಅದನ್ನು ನಿರ್ಲಕ್ಷಿಸಬಾರದು ಎನ್ನುತ್ತಾರೆ ಮನೋರೋಗ ತಜ್ಞರು.
ಒಂದು ಕರೆ ನಿರ್ಧಾರ ಬದಲಿಸುತ್ತದೆ
ಆತ್ಮಹತ್ಯೆ ಬಹುತೇಕ ಸಂದರ್ಭಗಳಲ್ಲಿ ಆ ಕ್ಷಣದ ನಿರ್ಧಾರ. ಆ ಕ್ಷಣದಲ್ಲಿ ದುಡುಕದೆ ಇದ್ದರೆ ಭವಿಷ್ಯ ಉತ್ತಮವಾಗಿರುತ್ತದೆ. ಆ ಕ್ಷಣ ದಾಟಿದವರು ಆತ್ಮಹತ್ಯೆಯಿಂದ ವಿಮುಖರಾಗುವ ಸಾಧ್ಯತೆ ಹೆಚ್ಚು. ಯಾರಿಗಾದರೂ ಆತ್ಮಹತ್ಯೆಯ ಯೋಚನೆ ಬಂದರೆ ಆತ್ಮೀಯರಿಗೆ ಕರೆ ಮಾಡಬೇಕು ಅಥವಾ 14416 ಸಹಾಯವಾಣಿಗೆ ಕರೆ ಮಾಡಿದರೆ ಸೂಕ್ತ ಸಲಹೆ, ಪರಿಹಾರ ದೊರೆಯುತ್ತದೆ. ಈ ಸಹಾಯವಾಣಿ ವಾರದ ಎಲ್ಲ ದಿನವೂ 24 ತಾಸುಗಳ ಕಾಲವೂ ಸೇವೆಯಲ್ಲಿರುತ್ತದೆ.
ಹೀಗಿರುವಾಗ ಬೆಳೆದು ನಿಂತ ಮಕ್ಕಳು ಆತ್ಮಹತ್ಯೆಯ ಹಾದಿ ಹಿಡಿದರೆ ಹೆತ್ತವರ ಪರಿಸ್ಥಿತಿ ಏನಾಗಬಹುದೆಂಬ ಚಿಂತನೆ ಮಕ್ಕಳಲ್ಲಿ ಒಡಮೂಡಬೇಕು. ಎಂತಹ ಸಮಸ್ಯೆಯನ್ನೂ ಎದುರಿಸುವುದಕ್ಕೆ ಸಾಧ್ಯವಿದೆ. ಯಾವ ಸಂದರ್ಭಗಳಲ್ಲೂ ತನಗಿನ್ನು ಬೇರೆ ದಾರಿಯೇ ಇಲ್ಲ ಎಂದು ಕೈಚೆಲ್ಲಿ ಕೂರಬಾರದು .
ಓ ಮೆದುಳೇ ರಿಲಾಕ್ಸ್…














