ಮಾಳ ಗ್ರಾಮದ ಆರೋಪಿ ಸಂತೋಷ್.ಟಿ(32) ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರು, ಕಳವು ಮಾಡಿದ 33 ಪವನ್ ತೂಕದ 10,05,000 ಮೌಲ್ಯದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಕಳವು ಆರೋಪಿಯ ಬಂಧನ
ಕಾರ್ಕಳ : ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆಯಲ್ಲಿರುವ ವಾಸ್ತವ್ಯದ ಮನೆಯೊಂದರ ಗೋದ್ರೇಜ್ ಲಾಕರ್ ನಲ್ಲಿ ಇಡಲಾಗಿದ್ದ ರೂ 10,05,000 ಮೌಲ್ಯದ 33 ಪವನ್ ಚಿನ್ನಾಭರಣ ಕಳವು ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಆ. 3೦ ರಂದು ಮಧ್ಯಾಹ್ನ 3:30 ಗಂಟೆಯಿಂದ ಸಾಯಂಕಾಲ 5:00 ಗಂಟೆಯ ಮಧ್ಯೆ ಈ ಘಟನೆ ನಡೆದಿತ್ತು.
ಯಾರೋ ಕಳ್ಳರು ಕಾರ್ಕಳ ತಾಲೂಕು, ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆಯಲ್ಲಿರುವ ವಾಸ್ತವ್ಯದ ಮನೆಯ ಬೀಗವನ್ನು ಮನೆಯ ಹೊರಗಡೆ ಡಬ್ಬಿಯಲ್ಲಿ ಇರಿಸಿದ್ದ ಕೀ ಯನ್ನು ಬಳಸಿ, ತೆರೆದು, ಮನೆಯ ಒಳಗಡೆ ಪ್ರವೇಶಿಸಿ ಮನೆಯ ಬೆಡ್ ರೂಮ್ನಲ್ಲಿದ್ದ ಗೋದ್ರೇಜ್ ಲಾಕರ್ ನ್ನು ಅಲ್ಲೇ ಇರಿಸಿದ್ದ ಕೀ ಸಹಾಯದಿಂದ ತೆರೆದು ಲಾಕರ್ ನಲ್ಲಿರಿಸಿದ್ದ ಚಿನ್ನಾಭರಣಗಳ ಪೈಕಿ ಸುಮಾರು 33 ಪವನ್ ತೂಕದ 10,05,000 ಅಂದಾಜು ಮೌಲ್ಯದ ವಿವಿಧ ರೀತಿಯ ಚಿನ್ನಾಭರಣಗಳನ್ನು ಕಳವು ಮಾಡಿದ್ದರು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್ಐ ದಿಲೀಪ್ ಜಿ.ಆರ್ ಮತ್ತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ತನಿಖಾ ವಿಭಾಗದ ಪಿ.ಎಸ್.ಐ ಸುಂದರ ಹಾಗೂ ಸಿಬ್ಬಂದಿಯವರಾದ ಮಹಾಂತೇಶ್, ಪ್ರಶಾಂತ್ ಕೆ, ವಿಶ್ವನಾಥ, ಶಶಿಕುಮಾರ್, ನಾಗರಾಜ, ಗೋವಿಂದ ಆಚಾರಿ ರಾಘವೇಂದ್ರ, ಅಶೋಕ ರವರು ವಿಶೇಷ ತಂಡವನ್ನು ರಚಿಸಿ ಪ್ರಕರಣದ ತನಿಖೆ ನಡೆಸಲಾಗಿತ್ತು.
ಮಾಳ ಗ್ರಾಮದ ಆರೋಪಿ ಸಂತೋಷ್.ಟಿ(32) ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರು, ಕಳವು ಮಾಡಿದ 33 ಪವನ್ ತೂಕದ 10,05,000 ಮೌಲ್ಯದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.






































