ಕಲ್ಲುಗಣಿ ಟಿಪ್ಪರ್‌ಗಳಿಗೆ ಕಿತ್ತುಹೋದ ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಳ ರಸ್ತೆ

Picture of RB NEWS

RB NEWS

Bureau Report


ಕಾರ್ಕಳ: ಕಲ್ಲುಗಣಿಗಳಿಂದ ಎಗ್ಗಿಲ್ಲದೇ ಕರಿಕಲ್ಲುಗಳನ್ನು ಹೊತ್ತು ಹೋಗುವ ಟಿಪ್ಪರ್‌ಗಳ ಓಡಾಟಕ್ಕೆ ನಕ್ರೆಯ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹಾಗೂ ಉಡುಪಿ-ಸುಬ್ರಹ್ಮಣ್ಯಕ್ಕೆ ಹಾದು ಹೋದು ಹೋಗುವ ರಾಜ್ಯ ಹೆದ್ದಾರಿ ಸಂಪರ್ಕಿಸುವ ರಸ್ತೆ ಪೂರ್ತಿ ಡಾಂಬರು ಕಿತ್ತು ಹೋಗಿದೆ.


ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಳ ರಸ್ತೆ ಇದಾಗಿದ್ದು, ಪ್ರತಿದಿನ ಅಸಂಖ್ಯಾತ ಭಕ್ತಾದಿಗಳು ಇದೇ ರಸ್ತೆಯಾಗಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ.


ಪರಿಸರದಲ್ಲಿ ಇರುವ ಕರಿಕಲ್ಲಿನಗಣಿಯಲ್ಲಿ ಉತ್ಪಾದನೆಯಾಗುವ ಕರಿಕಲ್ಲುಗಳನ್ನು ಟಿಪ್ಪರ್‌ಗಳಲ್ಲಿ ಸಾಗಾಟವಾಗುತ್ತಿದ್ದು, ಗ್ರಾಮೀಣ ಪ್ರದೇಶದ ರಸ್ತೆಗೆ ಅನುಗುಣಕ್ಕಿಂತ ಅಧಿಕಭಾರದಲ್ಲಿ ಸರಕು ಸಾಗಾಟವಾಗುತ್ತಿರುವುದರಿಂದ ರಸ್ತೆ ದುಸ್ಥಿತಿಗೆ ಕಾರಣವಾಗಿದೆ.

ದುಸ್ಥಿತಿಯಲ್ಲಿ ಇರುವ ರಸ್ತೆಯೂ ಉಡುಪಿ ಜಿಲ್ಲಾ ಪಂಚಾಯತ್ ಅಧೀನಕ್ಕೊಳಪಡುತ್ತಿದ್ದು, ಪಂಚಾಯತ್ ರಾಜ್ ವಿಭಾಗವು ಇದರ ಜವಾಬ್ದಾರಿ ನಿರ್ವಹಿಸುತ್ತಾ ಬಂದಿದೆ. ಕಳೆದ ಐದು ವರ್ಷಗಳ ಹಿಂದೆ ಸಾರ್ವಜನಿಕರ ಮನವಿಯ ಹಿನ್ನಲೆಯಲ್ಲಿ ರಸ್ತೆ ದುರಸ್ಥಿ ಕಾಮಗಾರಿ ನಡೆದಿತ್ತು. ಆ ಬಳಿಕ ಇದುವರೆಗೆ ಯಾವುದೇ ರೀತಿಯಲ್ಲಿ ದುರಸ್ಥಿ ಕಾರ್ಯ ನಡೆಯದೇ ಹೋದುದರಿಂದ ಪರಿಸರದ ನಾಗರಿಕರು ನಾನಾ ಸಮಸ್ಸೆಗಳನ್ನು ಎದುರಿಸುತ್ತಿದ್ದಾರೆ.
ಎರಡು ತಿಂಗಳ ಬಳಿಕ ಮಳೆಗಾಲ ಎದುರಾಗುವುದರಿಂದ ರಸ್ತೆಯಲ್ಲಿನ ಹೊಂಡದಲ್ಲಿ ಮಳೆ ನೀರು ನಿಂತು ಇನ್ನಷ್ಟು ರಸ್ತೆ ಹಾಳಾಗುವ ಸಾಧ್ಯತೆಗಳು ಹೆಚ್ಚಾಗಿದೆ.
ನಕ್ರೆ-ರಂಗನಪಲ್ಕೆ ರಸ್ತೆ ದುರಸ್ಥಿ ಪಡಿಸಬೇಕೆಂದು ನಾಗರಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top