ಕಾರ್ಕಳ: ಓದದೆಯೂ ಮನುಷ್ಯರು ಸಾಧಿಸಬಲ್ಲರು. ಆದರೆ ಓದುವುದು ಎಲ್ಲರಿಗೂ ಅನಿವಾರ್ಯವಾಗಬೇಕು. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿಯೇ ಸಿಗುತ್ತದೆ. ಭಾಷೆ ತೊಡಕಾಗದಂತೆ ನಮ್ಮ ಓದನ್ನು ವಿಸ್ತರಿಸಿಕೊಳ್ಳಬೇಕು ಎಂದು ತುಳು ಸಿನಿಮಾ ನಟ ಪ್ರಸನ್ನ ಶೆಟ್ಟಿ ಬೈಲೂರು ಹೇಳಿದರು.
ಅವರು ಶ್ರೀ ಭುವನೇಂದ್ರ ಕಾಲೇಜಿನ ಲಲಿತಕಲಾ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡುತ್ತಾ,ವಿದ್ಯೆಯನ್ನು ಕಡೆಗಣಿಸಬೇಡಿ ಎಂದ ಪ್ರಸನ್ನರ ಮಾತು ನಮ್ಮ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.ಅವರು ತಮ್ಮ ನಟನೆಯ ಮೂಲಕ ಎಲ್ಲರೂ ಗುರುತಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಪ್ರಿಯಾ ಪ್ರಸನ್ನ ಶೆಟ್ಟಿ, ಐಕ್ಯೂಎಸಿ ಸಂಯೋಜಕರಾದ, ಪ್ರೊ.ಹೆಚ್.ನಾಗಭೂಷಣ್, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಅದಿತಿ ಕಾರಂತ್,ವಿಯೋಲ ಆರ್,ಸೌರಭ ಪಾಠಕ್ ಉಪಸ್ಥಿತರಿದ್ದರು.
ವಿಯೋಲ ಆರ್.ಕಾರ್ಯಕ್ರಮ ನಿರೂಪಿಸಿದರು. ಲಲಿತಕಲಾ ಸಂಘದ ಸಂಯೋಜಕರಾದ ಪ್ರೊ.ನಂದಕಿಶೋರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಜೈಸನ್ ಸ್ವಾಗತಿಸಿ,ಕವನ ವಂದಿಸಿದರು.ಸೌರಭ ಪಾಠಕ್ ಅತಿಥಿ ಪರಿಚಯ ಮಾಡಿದರು.





















