ಕರ್ನಾಟಕ ಪೊಲೀಸರಿಗೆ ಹೊಸ ಟೋಪಿ

Picture of RB NEWS

RB NEWS

Bureau Report

ಬೆಂಗಳೂರು : ಪೊಲೀಸರು ಇಂದಿನಿಂದ ಹೊಸ ಟೋಪಿಗಳಲ್ಲಿ ಮಿಂಚಲಿದ್ದಾರೆ ರಾಜ್ಯದ ಪೊಲೀಸ್ ಕಾಸ್ಟೇಬಲ್ ಹಾಗೂ ಹೆಡ್ ಕಾನ್ಸ್‌ಟೇಬಲ್‌ಗಳಿಗೆ ಇಂದು ನೀಲಿ ವರ್ಣದ ಕ್ಯಾಪ್ ಗಳನ್ನ ವಿತರಿಸಲಾಗಿದ್ದು ಸಾಂಪ್ರದಾಯಿಕ ಹಳೆಯ ಸ್ಟೋಚ್ ಟೋಪಿಗಳಿಗೆ ತಿಲಾಂಜಲಿ ನೀಡಲಾಗಿದೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಪೊಲೀಸ್ ಕಾನ್ಸೆಬಲ್‌ ಮತ್ತು ಹೆಡ್ ಕಾನ್ಸೆಬಲ್ಗಳಿಗೆ ಹೊಸ ಕ್ಯಾಪ್ ಗಳನ್ನ ವಿತರಿಸಿದರು ಇಂದು ಬೆಂಗಳೂರಿನ ಪೋಲಿಸರಿಗೆ ವಿತರಣೆಯಾಗಿದ್ದು ಪೊಲೀಸ್ ಕಾನ್ಸೆಬಲ್ ಹಾಗೂ ಇನ್ನು ಮುಂದೆ ನೀಲಿ ಬಣ್ಣದ ಕ್ಯಾಪ್ ಧರಿಸಲಿದ್ದಾರೆ ರಾಜ್ಯದಲ್ಲಿ ಪೊಲೀಸ್ ಕಾನ್ಸೆಬಲ್ ಗಳು ನೀಲಿ ವರ್ಣದ ಗ್ಯಾಪ್ ಗಳಲ್ಲಿ ಮಿಂಚುವರು ಕಳೆದ ಜೂನ್ ನಲ್ಲಿ ನಡೆದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಪೊಲೀಸ್ ಕಾನ್ಸೆಬಲ್ ಮತ್ತು ಹೆಡ್ ಕಾನ್ಸೆಬಲ್ಗಳಿಗೆ ಹೊಸ ಕ್ಯಾಪ್ ವಿತರಿಸುವ ಬಗ್ಗೆ ನಿರ್ಧರಿಸಲಾಗಿತ್ತು ತೆಲಂಗಾಣ ಪೋಲೀಸರು ಧರಿಸುತ್ತಿರುವ ತೆಳುವಾದ ನೀಲಿ ಬಣ್ಣದ ಪಿಕ್ಯಾಪ್ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದು ಅದರಂತೆ ಇಂದಿನಿಂದ ಪೊಲೀಸ್‌ ಕಾನ್ಸೆಬಲ್ ಮತ್ತು ನೀಡಲಾಗಿದೆ

ರಾಜ್ಯದಲ್ಲಿ ಪೊಲೀಸ್‌ ಸಿಬ್ಬಂದಿಗೆ ಸ್ಟೋಚ್ ಹ್ಯಾಟ್ ಬದಲಿಗೆ ‘ಪೀಕ್ ಕ್ಯಾಪ್’ ಬಂದಿದೆ, ಹಿಂದೆ ರಾಜ್ಯದ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳು ಧರಿಸುತ್ತಿದ್ದ ಗ್ಲೋಚ್ ಹ್ಯಾಟ್ ಕ್ಯಾಪ್‌ನಲ್ಲಿ ಬದಲಾವಣೆ ತರಲಾಗಿದೆ.

ಕೇರಳದಲ್ಲಿ ಪೀಕ್ ಕ್ಯಾಪ್ ಧರಿಸಲಾಗುತ್ತಿದ್ದು, ಇದು ನೀಲಿ ಬಣ್ಣವನ್ನು ಹೊಂದಿದೆ. ಸಾರ್ವಜನಿಕ ಮನ್ನಣೆ ಮತ್ತು ಅಧಿಕಾರ ಪ್ರಜ್ಞೆಯನ್ನು ಸಂಕೇತವಾಗಿದ್ದು, ಇದು ಬಿಸಿಲು ಮತ್ತು ಮಳೆಯಿಂದ ರಕ್ಷಿಸುವ ಕೂಡ ಸಹಾಯವಾಗಿದೆ. ಚಪ್ಪಟೆಯಾದ ಮೇಲ್ಬಾಗ, ಬಾಗಿದ ಮುಖವಾಡ ಮತ್ತು ಮುಂಭಾಗದಲ್ಲಿ ಕೇರಳ ಪೊಲೀಸ್ (ಕೆಪಿ) ಲಾಂಛನವನ್ನು ಹೊಂದಿದೆ.

ಮಹಾರಾಷ್ಟ್ರ ಪೊಲೀಸ್ ಕಾನ್‌ಸ್ಟೇಬಲ್ ಕ್ಯಾಪ್ “ಪೀಕ್ ಕ್ಯಾಪ್” ಅಥವಾ ಸಾಂಪ್ರದಾಯಿಕ ಪೊಲೀಸ್ ಕ್ಯಾಪ್ ಎಂದು ಕರೆಯಲಾಗುತ್ತದೆ. ಇದು ಕಡು ನೀಲಿ ಬಣ್ಣದ ಟೋಪಿಯಾಗಿದ್ದು, ಚಪ್ಪಟೆಯಾದ ಮೇಲ್ಬಾಗ ಮತ್ತು ಬಾಗಿದ ವಿನ್ಯಾಸವನ್ನು ಹೊಂದಿದೆ. ಕ್ಯಾಪ್‌ನ ಮುಂಭಾಗದಲ್ಲಿ ಮಹಾರಾಷ್ಟ್ರ ಪೊಲೀಸ್ ಲಾಂಛನವಿದ್ದು, ಇದು ನಕ್ಷತ್ರ ಮತ್ತು ರಕ್ಷಣೆಯನ್ನು ಸೂಚಿಸಲು ಎರಡು ವೃತ್ತವನ್ನು ಒಳಗೊಂಡಿದೆ.

ಆಂಧ್ರಪ್ರದೇಶದ ಪೊಲೀಸ್ ಕಾನ್ಸ್ ಟೇಬಲ್‌ಗಳು ಕ್ಯಾಪ್‌ನ್ನು ಪೀಕ್ ಕ್ಯಾಪ್ ಎಂದು ಕರೆಯಲಾಗುತ್ತದೆ. ಇದು ನೀಲಿ ಬಣ್ಣವನ್ನು ಹೊಂದಿದೆ. ಗೋವಾದಲ್ಲಿ “ಪೀಕ್ ಕ್ಯಾಪ್” ಧರಿಸಿಕೊಳ್ಳಲಾಗುತ್ತದೆ. ಈ ಕ್ಯಾಪ್‌ನ ಮುಂಭಾಗದಲ್ಲಿ ಸಾಮಾನ್ಯವಾಗಿ ಪೊಲೀಸ್ ಪಡೆಯ ಲಾಂಛನ ಇದೆ. ಈ ಲಾಂಛನವು ಅಧಿಕಾರ ಮತ್ತು ಜವಾಬ್ದಾರಿಯ ಸಂಕೇತವಾಗಿದೆ.

ತೆಲಂಗಾಣದಲ್ಲಿ ಕಾನ್‌ಸ್ಟೇಬಲ್ ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳು “ನೇವಿ ಬ್ಲೂ ಪೀಕ್ ಕ್ಯಾಪ್” ಬಳಸುತ್ತಾರೆ. ಇದೀಗ ಕರ್ನಾಟಕಕ್ಕೂ ಕೂಡ ಈ ಕ್ಯಾಪ್‌ಗಳನ್ನು ಬಳಸಲಾಗುತ್ತದೆ. ಇದು ಬಿಗಿಯಾದ ಫಿಟ್, ಸುಧಾರಿತ ವಿನ್ಯಾಸ ಮತ್ತು ವೃತ್ತಿಪರ ನೋಟವನ್ನು ನೀಡುತ್ತದೆ.

ಈ ಲಾಂಛನವು ಅಧಿಕಾರ ಮತ್ತು ಜವಾಬ್ದಾರಿಯ ಸಂಕೇತವಾಗಿದೆ.

ತೆಲಂಗಾಣದಲ್ಲಿ ಕಾನ್‌ಸ್ಟೇಬಲ್ ಮತ್ತು ಹೆಡ್‌ ಕಾನ್‌ಸ್ಟೆಬಲ್‌ಗಳು “ನೇವಿ ಬ್ಲೂ ಪೀಕ್ ಕ್ಯಾಪ್” ಬಳಸುತ್ತಾರೆ. ಇದೀಗ ಕರ್ನಾಟಕಕ್ಕೂ ಕೂಡ ಈ ಕ್ಯಾಪ್‌ಗಳನ್ನು ಬಳಸಲಾಗುತ್ತದೆ. ಇದು ಬಿಗಿಯಾದ ಫಿಟ್, ಸುಧಾರಿತ ವಿನ್ಯಾಸ ಮತ್ತು ವೃತ್ತಿಪರ ನೋಟವನ್ನು ನೀಡುತ್ತದೆ.

ದೆಹಲಿ ಪೊಲೀಸ್ ಕಾನ್‌ಸ್ಟೇಬಲ್ ತೆಗಳು ಧರಿಸುವ ಅತ್ಯಂತ ಸಾಮಾನ್ಯ ಶೈಲಿಯ ಕ್ಯಾಪ್, ಕಾನ್‌ಸ್ಟೆಬಲ್‌ಗಳು “ಬೆರೆಟ್ ಕ್ಯಾಪ್” ಹಾಕಿಕೊಳ್ಳುತ್ತಾರೆ. ಇದು ಅನೌಪಚಾರಿಕ ಸಮವಸ್ತ್ರಗಳ ಭಾಗವಾಗಿದೆ. ಇದು ಮಿಲಿಟರಿ ಶೈಲಿಯ ಕ್ಯಾಪ್ ಆಗಿದ್ದು, ಅದರ ನೋಟ ಕೂಡ ಅದೇ ರೀತಿ ಇದೆ. ಮೃದುವಾದ, ದುಂಡಗಿನ, ಚಪ್ಪಟೆಯಾಗಿದ್ದು, ಕಡು ನೀಲಿ ಬಣ್ಣದಲ್ಲಿರುತ್ತದೆ.

ತಮಿಳುನಾಡು ಪೊಲೀಸ್ ಕಾನ್‌ಸ್ಟೆಬಲ್‌ಗಳು ಧರಿಸುವ ಕ್ಯಾಪ್ “ಪೀಕ್ ಕ್ಯಾಪ್”, ಇದನ್ನು ಶಿಖರ ಕ್ಯಾಪ್ ಎಂದು ಕೂಡ ಕರೆಯುತ್ತಾರೆ. ನೌಕಾ ನೀಲಿ ಅಥವಾ ಖಾಕಿ ಬಣ್ಣವನ್ನು ಹೊಂದಿರುತ್ತದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top