
ಕರ್ನಾಟಕದ ಬಾಲಕಿಯರ ಪಾಲಿಗೆ ಬೆಳ್ಳಿಯ ಪದಕ
ವಿಜಯವಾಡ : 68 ನೇ ರಾಷ್ಟ್ರ ಮಟ್ಟದ ಶಾಲಾ ಮಟ್ಟದ ವಾಲಿಬಾಲ್ ಪಂದ್ಯಾಟವು ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆಯಿತು.
ತಮಿಳುನಾಡು- ಕರ್ನಾಟಕ ನಡುವೆ ಫೈನಲ್ ಸ್ಪರ್ಧೆ ಏರ್ಪಟ್ಟಿತು. ನೇರಹಣಾಹಣಿಯಲ್ಲಿ ತಮಿಳುನಾಡು ಪ್ರಥಮ ಸ್ಥಾನ ಹಾಗೂ ಕರ್ನಾಟಕ ದ್ವಿತೀಯ ಸ್ಥಾನಗಳಿಸಿದೆ.
ಕರ್ನಾಟಕ ತಂಡದಲ್ಲಿ ಕಾರ್ಕಳದ ಧ್ರುವಿ ಅಜ್ರಿ ಉತ್ತಮ ಕ್ರೀಡಾಪಟುವಾಗಿ ಅಂಗಣದಲ್ಲಿ ಇದ್ದಳು.



































