ಕರ್ನಾಟಕದಲ್ಲಿ ಗುಜರಾತಿ ವಾಹನಕ್ಕೆ ಕಾನೂನಿನಲ್ಲಿ ರಿಯಾಯಿತಿ ಇದೆಯಾ?

Picture of RB NEWS

RB NEWS

Bureau Report

*ವರದಿ: ಆರ್.ಬಿ.ಜಗದೀಶ್

ಭಾರತೀಯ ಕಾನೂನಿನಲ್ಲಿ ಎಲ್ಲರೂ ಸಮಾನರು. ಹೀಗೆಂದು ಸಂವಿಧಾನದಲ್ಲಿ ಉಲ್ಲೇಖವಾಗಿರುವುದು ಗಮನಾರ್ಹ.
-ಆದರೆ ಮೇಲಿನ ಉಲ್ಲೇಖವೂ ಕೆಲವೊಂದು ಸಂದರ್ಭಗಳಲ್ಲಿ ಎಲ್ಲರಿಗೂ ಅನ್ವಯವಾಗಿವುದು ಇಲ್ಲ. ಕರ್ನಾಟಕ ರಾಜ್ಯದಲ್ಲಿ ಗುಜರಾತಿ ವಾಹನಕ್ಕೆ ಕಾನೂನಿನಲ್ಲಿ ರಿಯಾಯಿತಿ ನೀಡಲಾಗಿದೆ ಎಂಬ ಸತ್ಯವೂ “ಆರ್.ಬಿ.ನ್ಯೂಸ್” ರಿಯಾಲಿಟಿ ಚೆಕ್ ಮೂಲಕ ಬಯಲು ಗೊಳಿಸಿದೆ.
ಇಂತಹ ದೃಶ್ಯಾವಳಿ ಕಂಡು ಬಂದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳುಬಾಯಿ ಮತ್ತು ಉಡುಪಿ ಜಿಲ್ಲೆಯ ಕಾಂತಾವರದ ಗಡಿಭಾಗದಲ್ಲಿ ಎಂಬುವುದು ಗಮನಾರ್ಹ.‌

ರಾಷ್ಟ್ರೀಯ ಹೆದ್ದಾರಿ -169ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದು ಉತ್ತಮ ಬೆಳವಣಿ. ಆದರೆ ಇತ್ತೀಚಿಗಿನ ದಿನಗಳಲ್ಲಿ ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿದೆ. ಇದರಿಂದಾಗಿ ಈ ಪರಿಸರದ ಹಲವು ಸಮಸ್ಯೆಗಳು ಉದ್ಭವವಾಗಿವೆ ಹಾಗೂ ಪ್ರಾಣಪಾಯಗಳು ಎದುರಾಗಿವೆ.

ಈ ರಸ್ತೆ ಕಾಮಗಾರಿ ನಡೆಯುತ್ತಿರುವಾಗ ಕೆಲವೊಂದು ನಿರ್ಲಕ್ಷಗಳಿಂದಾಗಿ ರಸ್ತೆಯಲ್ಲಿ ಓಡಾಡುವ ನಾಗರಿಕರು ಮತ್ತು ದ್ವಿಚಕ್ರ ವಾಹನ ಸೇರಿದಂತೆ ಲಘವಾಹನಗಳಲ್ಲಿ ಓಡಾಡುವವರ ಜೀವಪಾಯಕ್ಕೂ ಕಾರಣವಾಗಬಹುದು.

ಕಾಂತಾವರ ಚಿಲಿಂಬಿ ಬಳಿಯ ಎತ್ತರದ ಗುಡ್ಡವನ್ನು ಕಡೆದು ಅದರ ಮಣ್ಣನ್ನು ಸಾಣೂರು ಯಾಡ್೯ಗೆ ಸಾಗಿಸಲಾಗುತ್ತಿದೆ. ವಾಹನಗಳಲ್ಲಿ ಕಲ್ಲು ಮಣ್ಣು ಸಾಗಿಸುವಾಗ ಕೆಲವು ಸಂಚಾರಿ ನಿಯಮಗಳಿವೆ ಆದರೆ ಅದೆಲ್ಲವನ್ನು ಗಾಳಿಗೆ ತೂರಿ ಈ ಟಿಪ್ಪರ್ ಗಳಲ್ಲಿ ಕಲ್ಲು ಮಣ್ಣು ಸಾಗಾಟ ಮಾಡಲಾಗುತ್ತಿದೆ.

ಚಿಲಿಂಬಿಯಲ್ಲಿ ಕಾರ್ಕಳ ನಗರಠಾಣೆಯ ಪೊಲೀಸ್ ಚೆಕ್ ಪೋಸ್ಟ್ ಇದೆ. ಇದರ ಮೂಲಕವಾಗಿ ಕಾನೂನು ಉಲ್ಲಂಘನೆ ಮಾಡಿ ಟಿಪ್ಪರ್ ನಲ್ಲಿ ಅಪಾಯಕಾರಿ ರೀತಿಯಲ್ಲಿ ಕಲ್ಲು,ಮಣ್ಣು ತುಂಬಿಸಿ ಸಾಗಟಮಾಡಲಾಗುತ್ತಿತ್ತು. ಈ ದೃಶ್ಯಾವಳಿಯನ್ನು “ಆರ್.ಬಿ.ನ್ಯೂಸ್” ರಿಯಾಲಿಟಿ ಚೆಕ್ ಮೂಲಕ ಬಯಲುಗೊಳಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top