ಕರ್ತವ್ಯದ ಪ್ರಜ್ಞೆ ಬೆಳೆಸಲು ಪ್ರತಿಭಟಿಸಿ ಹಕ್ಕಿಗಾಗಿ ಅಲ್ಲ – ಗಣೇಶ್ ಕಾರ್ಣಿಕ್
ಮಾನವೀಯ ಗುಣ, ಉತ್ತಮ ವಿದ್ಯಾಭ್ಯಾಸ, ಶ್ರೇಷ್ಠ ಕ್ರೀಡಾಪಟುಗಳಿಂದಲೇ ಭಾರತ ಬಲಿಷ್ಠ – ಯು.ಟಿ.ಖಾದರ್

ಮೂಡುಬಿದಿರೆ: ಇಲ್ಲಿಗೆ ಸಮೀಪದ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ರಾಜ ಸಭಾಗೃಹದಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವದ ದಿಕ್ಸೂಚಿ ಭಾಷಣ ಮಾಡಿದ ನಿವೃತ್ತ ಯೋಧ, ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಮಾತನಾಡಿ ಸೈನಿಕರಿಗೆ, ಧ್ವಜಕ್ಕೆ ಗೌರವ ಕೊಡುವ ಅಗತ್ಯತೆ ಸೈನ್ಯದ ಬಿಲ್ಲೆ ಧರಿಸಿದಾಕ್ಷಣ ರಾಷ್ಟ್ರ ಗೌರವವೇ ಮುಖ್ಯ. ಹಕ್ಕಿಗಾಗಿ ಅಲ್ಲ ಕರ್ತವ್ಯ ಪ್ರಜ್ಞೆ ಬೆಳೆಸಲು, ಉಳಿಸಿಕೊಳ್ಳಲು ಪ್ರತಿಭಟಿಸಿ. ದೇಶದ ಕಾನೂನು ಉಲ್ಲಂಘಿಸುವ ಪ್ರಯತ್ನ ಬೇಡ. ಸೈನಿಕರ ಉಸಿರಿನಿಂದ ಹಾರಾಡುತ್ತಿದೆ. ಹೀಗಾಗಿ ದೇಶಕ್ಕಾಗಿ ಬದುಕಿರಿ ಎಂದು ಮಕ್ಕಳನ್ನು ಕೇಳಿಕೊಂಡರು. ದೇಶದ ಭವ್ಯ ಪರಂಪರೆ, ಜ್ಞಾನ ಬೋಧನೆ ಉಳಿಸಿಕೊಳ್ಳಲು ಕೇಳಿಕೊಂಡರು.





ಪದವಿ ಪೂರ್ವ, ಪದವಿ, ಪ್ರೌಢಶಾಲೆ ಹಾಗೂ ಇತರ ಸಾಧಕ ವಿದ್ಯಾರ್ಥಿಗಳಿಗೆ ಸಂಮಾನ ಗೈದು ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ಯು ಟಿ ಖಾದರ್ ಮಾತನಾಡಿ ಉತ್ತಮ ವಿದ್ಯಾರ್ಥಿಗಳು, ಶ್ರೇಷ್ಠ ಕ್ರೀಡಾಪಟುಗಳು ಗಳಿಂದಲೇ ಭಾರತ ದೇಶ ಬಲಿಷ್ಠ ಆಗಲು ಸಾಧ್ಯ. ಭಾರತದ ಸತ್ಪ್ರಜೆಗಳಾಗಿ, ತಂದೆ ತಾಯಿಯರನ್ನು ಗೌರವಿಸಿ ಉತ್ತಮ ಪ್ರೀತಿ ವಿಶ್ವಾಸಗಳನ್ನು ಮಾನವೀಯತೆಯನ್ನು ಮೈಗೂಡಿಸಿಕೊಂಡು ಬಲಿಷ್ಠ ಭಾರತ ದೇಶವನ್ನು ನಿರ್ಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ರಾಜಕಾರಣಿ ಉತ್ತಮನಾದರೆ ಎಲ್ಲ ವಿಭಾಗಗಳನ್ನು ಎತ್ತರಿಸುವುದಕ್ಕೆ ಉತ್ತಮ ಮಟ್ಟಕ್ಕೆ ಕೊಂಡು ಹೋಗೋದಕ್ಕೆ ಸಾಧ್ಯ ಇದೆ ಎಂದು ತಿಳಿಸಿದರು.
ಕಾರ್ಯದರ್ಶಿ ರಶ್ಮಿತಾ ಜೈನ್ ರ ಮೂಡುಬಿದಿರೆಯಿಂದ ವೇಣೂರು ತನಕ 1ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಅದಮ್ಯ ಚೇತನ ಫೌಂಡೇಶನ್ ನ ಅಧ್ಯಕ್ಷ, ಸಹ ಸಂಸ್ಥಾಪಕ ತೇಜಸ್ವಿನಿ ಅನಂತಕುಮಾರ್ 225 ಕಿ.ವ್ಯಾಟ್ ಸೋಲಾರ್ ಘಟಕ ಉದ್ಘಾಟಿಸಿ ಶುಭ ಹಾರೈಸಿದರು. ಹಾಗೂ ಸಂಸ್ಥೆಯ ವಾರ್ಷಿಕ ಸಂಚಿಕೆ ಮೌಲ್ಯ ವನ್ನು ಲೋಕಾರ್ಪಣೆ ಗೈದರು.
ವೇದಿಕೆಯಲ್ಲಿ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಅರಮನೆಯ ಕುಲದೀಪ್ ಎಂ. ಹಾಜರಿದ್ದರು.
































