








ಕರುವಿಗೆ ತೊಟ್ಟಿಲಿಗೆ ಹಾಕುವ ಸಂಪ್ರದಾಯ ನೋಡಿದ್ದೀರಾ?


ಕಾರ್ಕಳ: ಕರುವೊಂದಕ್ಕೆ ತೊಟ್ಟಿಲಿಗೆ ಹಾಕುವ ಸಂಪ್ರದಾಯ ನೋಡಿದ್ದೀರಾ?
-ಹೌದು ಇದು ಕಾರ್ಕಳ ನಗರದ ಬಂಡೀಮಠದ ಅನಂತಕೃಷ್ಣ ಗೋಶಾಲೆಯಲ್ಲಿ ನಡೆಸಿದ ಧಾರ್ಮಿಕ ವಿಧಿವಿಧಾನ. ಇದಕ್ಕೆ ಡೋಲಾರೋಪಣಾ ಸೇವೆ ಎಂದು ಕರೆಯಲ್ಪಡುತ್ತಾರೆ. ಲೋಕಾಕಲ್ಯಾಣಾರ್ಥವಾಗಿ, ದೇಶದ ಸುಭಿಕ್ಷೆ, ಇಷ್ಟಾರ್ಥ ಸಿದ್ಧಿ, ದೇವರ ಪ್ರಸನ್ನಕೋಸ್ಕರವಾಗಿ ಈ ಸೇವೆಯನ್ನು ನಡೆಸುತ್ತಾರೆ. 1 ಕೋಟಿ ಗೊಪಾಲಕೃಷ್ಣ ಜಪ ಪಠಿಸಿ, ಗೋಪಾಲಕೃಷ್ಣ ಹೋಮದೊಂದಿಗೆ ಕರುವನ್ನು ತೊಟ್ಟಿಲಿಗೆ ಹಾಕಿ, ಹಣ್ಣುಕಾಯಿ ಹರಿವಾಣದೊಂದಿಗೆ ಮಂಗಳಾರತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳುತ್ತದೆ.
1ಕೋಟಿ ಗೋಪಾಲಕೃಷ್ಣ ಜಪ ಪಠಿಸಲು ಸುಮಾರು ಆರು ತಿಂಗಳು ಕಳೆದಿದೆ. 1ಕೋಟಿ ಜಪಕ್ಕೆ 1 ಲಕ್ಷ ಹೋಮ ಮಾಡಬೇಕೆಂಬ ವಾಡಿಕೆ ಇದೆ. ಜನವರಿ 5ರಂದು ನಡೆಸಿದ ಗೋಪಾಲಕೃಷ್ಣ ಹೋಮದಲ್ಲಿ 10 ಸಾವಿರ ಹೋಮದ ಸಂಕಲ್ಪ ಹೊತ್ತು ಕೊಂಡಿದ್ದರು. ಅದರಂತೆ ಮುಂದೆ 9 ಹೋಮದಲ್ಲಿ 90 ಸಾವಿರ ಹೋಮದ ಸಂಕಲ್ಪಿಸಬೇಕಾಗಿದೆ. ಡೋಲಾರೋಪಣಾ ಸೇವಾ ಕಾರ್ಯವನ್ನು ಉಡುಪಿಯ ರಾಮದಾಸ ಭಟ್ ವಹಿಸಿಕೊಂಡಿದ್ದಾರೆ ಎಂದು ಅನಂತಕೃಷ್ಣ ಗೋಶಾಲೆಯ ಮುಖ್ಯಸ್ಥ ಗೋಪಿನಾಥ ಭಟ್ ಮಾಹಿತಿ ನೀಡಿದ್ದಾರೆ.
ಗೋವಾ-ಮಹಾರಾಷ್ಟç ರಾಜ್ಯದ ಗಡಿಭಾಗದಲ್ಲಿ ಗೌಳಿಗ ಸಮುದಾಯದವರು ಆಚರಿಸುತ್ತಿದ್ದರು ಎಂದು ತಿಳಿದುಬಂದಿದೆ.



ಕಾರ್ಕಳ ಶಾಸಕ ವಿ.ಸುನೀಲ್ಕುಮಾರ್ ಅವರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೋವುಗಳಿಗೆ ಪೂಜೆ ನೆರವೇರಿಸಿದರು.
179 ವರ್ಷದ ಇತಿಹಾಸ….
ಬಂಡೀಮಠ ಬಳಿಯಲ್ಲಿ ಇರುವ ಅನಂತಗೋಶಾಲೆಗೆ 179 ವರ್ಷದ ಇತಿಹಾಸ ಇದ್ದು, ಕಳೆದ 5 ವರ್ಷಗಳಷ್ಟೇ ಈ ಗೋಶಾಲೆಗೆ ನೊಂದಾಣೆಯಾಗಿದೆ.
ಕುಟ್ಟಪ್ಪ ಭಟ್ ಅವರು ಆರಂಭಿಸಿದ ಗೋಶಾಲೆಯನ್ನು ವಾಮನ ಭಟ್, ನರಸಿಂಹ ಭಟ್ ಹೀಗೆ ಅನುವಂಶಿಕವಾಗಿ ಇದೀಗ ಗೋಪಿನಾಥ ಭಟ್ ನಿರ್ವಹಿಸುತ್ತಾ ಬಂದಿದ್ದಾರೆ.

ದನದ ಹಟ್ಟಿಯಲ್ಲಿ ಹುಟ್ಟಿದ ಗೋಪಿನಾಥ ಬಟ್ ಹಾಗೂ ಸಹೋದರರು?!
ಗೋಪಿನಾಥ ಭಟ್ ಹಾಗೂ ಅವರ ಹಿರಿತಲೆಮಾಡಿನವರು ವೈದಿಕ ವೃತ್ತಿ ನಡೆಸುವ ಮೂಲಕ ಜೀವನ ನಿರ್ವಹಿಸುತ್ತಿದ್ದರು. ಸಾಂಪ್ರಾದಾಯಿಕ ಮನೆತನದವರಾಗಿದ್ದ ಗೋಪಿನಾಥ ಭಟ್ ಹಾಗೂ ಅವರ ಐದು ಸಹೋದರರು ಅದೇ ದನದ ಹಟ್ಟಯಲ್ಲಿ ಹುಟ್ಟಿದು ಎಂದು ಗೋಪಿನಾಥ ಭಟ್ ನೆನಪಿಸಿಕೊಳ್ಳುತ್ತಾರೆ. ಒಂದೆಡೆ ಬಡತನ ಮತ್ತೊಂದೆಡೆ ಸಾಂಪದ್ರಾಯಿಕ ಮನೆತನ ಇದಕ್ಕೆ ಕಾರಣವೆನ್ನಲಾಗಿ ಎಂದು ವಿವರಿಸಿದ್ದಾರೆ.
18 ಸೆಂಟ್ಸ್ ಜಾಗದಲ್ಲಿ 190 ಗೋವುಗಳು!
ಕುಟುಂಬಸ್ಥರಿಗೆ ಸೇರಿದ ಮನೆ ಹಾಗೂ 18 ಸೆಂಟ್ಸ್ ಆಸ್ತಿಯಲ್ಲಿ ಅನಂತಕೃಷ್ಣ ಗೋಶಾಲೆ ಕಾರ್ಯಚರಿಸುತ್ತಿದೆ. ಒಟ್ಟು 190 ದಿನಗಳು ಇಲ್ಲಿವೆ. ದಾನಿಗಳ, ಸಂಘ-ಸAಸ್ಥೆಗಳ ನೆರವಿನೊಂದಿಗೆ ಗೋಶಾಲೆ ಮುನ್ನಡೆಯುತ್ತಾ ಬಂದಿದ್ದು, ಗೋಪ್ರೇಮಿಗಳು ನೆರವು ನೀಡಲು ಮುಂದಾಗಬಹುದೆAದು ಗೋಪಿನಾಥ ಭಟ್ ಕೋರಿದ್ದಾರೆ.




































