ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ) ಬೆದ್ರ , ಕರಾವಳಿ ಕೇಸರಿ ಮಹಿಳಾ ಘಟಕ ದರೆಗುಡ್ಡೆ ಇದರ 13ನೇ ವರ್ಷದ ವಾರ್ಷಿಕೋತ್ಸವ
ಮೂಡುಬಿದಿರೆ : ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ) ಬೆದ್ರ , ಕರಾವಳಿ ಕೇಸರಿ ಮಹಿಳಾ ಘಟಕ ದರೆಗುಡ್ಡೆ ಇದರ 13ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ 5ನೇ ವರ್ಷದ ಶನೀಶ್ವರ ಪೂಜೆ, ಧಾರ್ಮೀಕ ಸಭೆ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಅನಾರೋಗ್ಯದಿಂದ ಬಳಲುತ್ತಿರುವ ಬಡಕುಟುಂಬಗಳಿಗೆ ಸಹಾಯ ಧನ ವಿತರಣೆಯು ಫೆಬ್ರವರಿ 15ರಂದು ಸಂಜೆ 4.00 ಗಂಟೆಗೆ ದರೆಗುಡ್ಡೆ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜರಗಲಿರುವುದು.
ವೇದಮೂರ್ತಿ ನಾಗರಾಜ್ ಭಟ್ ಇವರ ನೇತೃತ್ವದಲ್ಲಿ ಸಂಜೆ ಗಂಟೆ 4.00ಕ್ಕೆ ಕಲಶಪ್ರತಿಷ್ಠೆ ,ಶ್ರೀ ಶನೀಶ್ವರ ಪೂಜೆ ಆರಂಭ ಸಂಜೆ 6.45ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಸಂಜೆ 7.30ರಿಂದ ಅನ್ನಸಂತರ್ಪಣೆ ಶಾಲಾ ಮಕ್ಕಳು ಮತ್ತು ನುರಿತ ಕಲಾವಿದರಿಂದ ನೃತ್ಯ ಸಿಂಚನ ಸಂಜೆ 7.00ರಿಂದ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಸಪ್ತಸ್ವರ ಮೆಲೋಡೀಸ್,ವಾಮದಪದವು ಮತ್ತು ಕಟಿಲೇಶ್ವರಿ ಮೆಲೋಡಿಸ್ ಕೆಲ್ಲಪುತ್ತಿಗೆ ಇವರು ನಡೆಸಿಕೊಡಲಿದ್ದಾರೆ.

ರಾತ್ರಿ 8.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಬಾಷಣಕಾರರಾಗಿ ಮುಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಬಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.































