ಕರಾವಳಿಯ ಪ್ರಮುಖ ಚಿಂತಕರು, ಬರಹಗಾರರು, ಸಂಘಟನೆಗಳು, ನಾಗರಿಕ ಸಮಾಜದ ಪ್ರಮುಖರೊಂದಿಗೆ ಬಿ ಕೆ ಹರಿಪ್ರಸಾದ್ ಸಭೆ

Picture of RB NEWS

RB NEWS

Bureau Report

ಮಂಗಳೂರು : ಕರಾವಳಿಯಲ್ಲಿ ತೀವ್ರಗೊಂಡಿರುವ ಮತೀಯ ಹಿಂಸೆ, ದ್ವೇಷ ಭಾಷಣ, ಹತ್ಯೆಗಳಿಂದ ಉಂಟಾಗಿರುವ ಗಂಭೀರ ಸ್ಥಿತಿಯ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಮಂಗಳೂರಿಗೆ ಆಗಮಿಸಿರುವ ಹಿರಿಯ ನೇತಾರ, ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರನ್ನು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರಮುಖ ಚಿಂತಕರು, ಬರಹಗಾರರು, ವೈದ್ಯರು, ನ್ಯಾಯವಾದಿಗಳು, ಸಾಮಾಜಿಕ ಮುಂದಾಳುಗಳು, ವಿವಿಧ ಸಂಘಟನೆಗಳ ಪ್ರಮುಖರು ಭೇಟಿಯಾಗಿ ಸಮಾಲೋಚನೆ ನಡೆಸಿದರು.

ದ.ಕ. ಉಡುಪಿ ಜಿಲ್ಲೆಯಲ್ಲಿ ಅಂಕೆ ಮೀರಿರುವ ಮತೀಯ ರಾಜಕಾರಣವನ್ನು ಹಿಮ್ಮೆಟ್ಟಿಸಲು ಸರಕಾರ ಹಾಗೂ ನಾಗರಿಕ ಚಳವಳಿಗಳು ನಡೆಸಬೇಕಾದ ಕ್ರಮಗಳ ಕುರಿತು ಗಂಭೀರ ಚರ್ಚೆ ನಡೆಸಿದರು. ಸರಕಾರಕ್ಕೆ ಮಹತ್ವದ ಸಲಹೆಗಳನ್ನು ನೀಡಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top