ಕರಾವಳಿಯ ಕರಾಟೆಪಟುಗಳಿಗೆ ಕಪ್ಪುಪಟ್ಟಿ

Picture of RB NEWS

RB NEWS

Bureau Report

ಕರಾವಳಿಯ ಕರಾಟೆಪಟುಗಳಿಗೆ ಕಪ್ಪುಪಟ್ಟಿ

ಉಡುಪಿ : ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ಇದರ ವತಿಯಿಂದ ಕೊಬುಡೊ ಬುಡೋಕಾನ್ ಕರಾಟೆ ಡೊ ಅಸೋಸಿಯೇಷನ್ (ರಿ) ಕರ್ನಾಟಕ ಇದರ ಸಹಭಾಗಿತ್ವದಲ್ಲಿ ದೊಡ್ಡಣ್ಣಗುಡ್ಡೆ ಜನತಾ ವ್ಯಾಯಾಮಶಾಲೆ ಇಲ್ಲಿ 2024 ನೇ ಸಾಲಿನ ಕರಾಟೆ ಕಪ್ಪು ಪಟ್ಟಿ ವಿಭಾಗದ ಪರೀಕ್ಷೆಯು ಜರುಗಿತು.

ಕಾರ್ಯಕ್ರಮವನ್ನು ಸಂಸ್ಥೆಯ ಗೌರವ ಅಧ್ಯಕ್ಷ ಡಾ. ಎನ್. ಬಿ. ವಿಜಯ ಬಲ್ಲಾಳ್,ಮುಖ್ಯ ಅತಿಥಿಗಳಾದ ಸ್ಥಳೀಯ ನಗರಸಭಾ ಸದಸ್ಯ ಪ್ರಭಾಕರ್ ಪೂಜಾರಿ, ಯಕ್ಷಗಾನ ಕಲಾಕೇಂದ್ರ ಗುಂಡಿಬೈಲು ಇದರ ಅಧ್ಯಕ್ಷ ಬಾಬು ಗೌಡ, ವ್ಯಾಯಾಮಶಾಲೆ ಯ ಅಧ್ಯಕ್ಷ ರಾಮದಾಸ್ ಶೆಟ್ಟಿ, ಏಷ್ಯಾದ ಮುಖ್ಯ ಪರಿವೀಕ್ಷಕ ಬಿ. ಪರಮೇಶ್ ಇವರು ಉದ್ಘಾಟಿಸಿದರು.

ಇದೇ ಸಂಧರ್ಭದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕ ಕ್ಯೋಷಿ ರವಿ ಕುಮಾರ್ ಉದ್ಯಾವರ, ಶಿಹಾನ್ ಹರ್ಷ ಭಾಗವತ್, ಶಿಹಾನ್ ಸಚಿನ್ ಪಿತ್ರೋಡಿ, ಶಿಹಾನ್ ಸೋಮನಾಥ್, ಶಿಹಾನ್ ದೀಪಕ್ ಪಿರೇರ, ಡಾ. ಅನೂಪ್ ಪೂಜಾರಿ, ಸೆನ್ಸಾಯಿ ಸೀತಾರಾಮ್ ಪೂಜಾರಿ ಉಪಸ್ಥಿತರಿದ್ದರು.

ಸುಮಾರು 35 ಕರಾಟೆ ವಿದ್ಯಾರ್ಥಿಗಳು ಕಪ್ಪು ಪಟ್ಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top