ಕರಾಟೆ: ಬೆಳುವಾಯಿ ಮರಿಯಮ್ ಶಾಲೆಯ ಸಾಧನೆ

ಮೂಡುಬಿದಿರೆ: ಸ್ಥಳೀಯ ಎಂ.ಕೆ.ಅನಂತ್ರಾಜ್ ಶಾರೀರಿಕ ಶಿಕ್ಷಣ ವಿದ್ಯಾಲಯ ಹಾಗೂ ಸ್ವಾಮಿ ಸ್ಟ್ರೆಂಥ್ ತರಬೇತಿ ಶಾಲೆಯ ಸಹಯೋಗದಲ್ಲಿ 21ನೇ ರಾಜ್ಯ ಕರಾಟೆ ಚಾಂಪಿಯನ್ ಶಿಪ್ 2024 ಮೂಡುಬಿದಿರೆ ಕನ್ನಡ ಭವನದಲ್ಲಿ ನಡೆಯಿತು.
ಅದರಲ್ಲಿ ಭಾಗವಹಿಸಿದ ಬೆಳುವಾಯಿ ಮರಿಯಮ್ ನಿಕೇತನ ಶಾಲೆಯ 58 ವಿದ್ಯಾರ್ಥಿಗಳು ವಿವಿಧ ಬೆಲ್ಟ ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
8 ಬಂಗಾರದ, 17 ಬೆಳ್ಳಿಯ, 25 ಕಂಚಿನ ದಾಗಿದ್ದು ತನ್ಮೂಲಕ ಯಶಸ್ವಿ ಕರಾಟೆ ಪಟುಗಳಾಗಿ ಹೊರಹೊಮ್ಮಿದ್ದಾರೆ.
ಎಲ್ಲರ ಸಾಧನೆಯಿಂದ ಶಾಲೆಗೆ 2 ನೇ ರನ್ನರ್ ಅಪ್ ಪ್ರಶಸ್ತಿಯ ಕಪ್ ದೊರಕಿದೆ.ಅವರೆಲ್ಲರ ಸಾಧನೆಯನ್ನು ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಜೆಸಿಂತಾ ಲಸ್ರಾದೊ ಅಭಿನಂದಿಸಿದರು.





































