ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ : ಪ್ರವಚನ ಸಂಪನ್ನ

Picture of RB NEWS

RB NEWS

Bureau Report

​

ಉಡುಪಿ : ಕರಂಬಳ್ಳಿ ವೆಂಕಟ್ರಮಣ ದೇವಸ್ಥಾನ ಆಡಳಿತ ಮಂಡಳಿ ಮತ್ತು ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಆಶ್ರಯದಲ್ಲಿ ಕಾರ್ತೀಕ ಮಾಸದ ಅಂಗವಾಗಿ ಹಮ್ಮಿಕೊಂಡ ಜ್ಞಾನ ದೀಪೋತ್ಸವವು ವಿಜೃಂಭಣೆಯಿಂದ ಸಂಪನ್ನಗೊಂಡಿತು.

7 ದಿನಗಳ ಪರ್ಯಂತ ಭಾಗವತ ಸಪ್ತಾಹ (ದಶಮ ಸ್ಕಂದ )ಪ್ರವಚನ ವನ್ನು ನಡೆಸಿ ಕೊಟ್ಟ ಉಡುಪಿ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ಶ್ರೀಪಾದರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು .

ವಾಸ್ತು ತಜ್ಞ ಶ್ರೀ ಸುಬ್ರಮಣ್ಯ ಭಟ್ ಗುಂಡಿಬೈಲ್ ಕಾರ್ತೀಕ ಮಾಸ ಜ್ಞಾನ ದೀಪೋತ್ಸವದ ಮಹತ್ವವನ್ನು ತಿಳಿಸಿದರು .ಉಡುಪಿ ಪುತ್ತಿಗೆ ಮಠದ ದಿವಾನ ಶ್ರೀ ನಾಗರಾಜ ಆಚಾರ್ಯ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಚಟುವಟಿಕೆಗಳನ್ನು ಕೊಂಡಾಡಿದರು .

ಸಮಿತಿಯ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ್ ಭಟ್ ಸ್ವಾಗತಿಸಿ ಕಾರ್ಯದರ್ಶಿ ನಾಗರಾಜ್ ಭಟ್ ವಂದಿಸಿದರು .ಅರ್ಚಕ ದಿವಾಕರ್ ಐತಾಳ್ ಉಪಸ್ಥಿತರಿದ್ದರು

ಸಮಿತಿಯ ಪದಾಧಿಕಾರಿಗಳಾದ ಅಜಿತ್ ಬಿಜಾಪುರ್ , ರಂಗನಾಥ ಸಾಮಗ ,ಲಕ್ಷ್ಮೀನಾರಾಯಣ ಆಚಾರ್ ,ರಂಗನಾಥ ಸರಳಾಯ ,ರಾಜಶೇಖರ್ , ಪ್ರಕಾಶಾಚಾರ್ ,ಶ್ರೀಪತಿ ಭಟ್ , ವೇದವ್ಯಾಸಾಚಾರ್ ,ಚಂದ್ರಕಾಂತ್ ಸಹಕರಿಸಿದರು . ವಾಸುದೇವ ಭಟ್ ನಿರ್ವಹಿಸಿದರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top