ಕಮ್ಯುನಿಸ್ಟ್ ಪಕ್ಷದ ಸಕ್ರಿಯಾ ಕಾರ್ಯಕರ್ತೆ ಕಮಲ ಪಕ್ಕಲಡ್ಕ ಇನ್ನಿಲ್ಲ

Picture of RB NEWS

RB NEWS

Bureau Report

ಮಂಗಳೂರು : ಕಮ್ಯುನಿಸ್ಟ್ ಪಕ್ಷದ ಅಪ್ಪಟ ಅಭಿಮಾನಿ, ಬಜಾಲ್ ಪಕ್ಕಲಡ್ಕದ ಅಂಗನವಾಡಿ ಕೇಂದ್ರದಲ್ಲಿ ಸುದೀರ್ಘ ಕಾಲ ಸಹಾಯಕ ಕಾರ್ಯಕರ್ತೆಯಾಗಿ ದುಡಿದಿರುವ ಕಾಂ. ಕಮಲ ಪಕ್ಕಲಡ್ಕ (91) ಶವಿವಾರ ಮುಂಜಾನೆ ಪಕ್ಕಲಡ್ಕದಲ್ಲಿರುವ ತಮ್ಮ‌ ಸ್ವಗೃಹದಲ್ಲಿ ನಿಧನ ಹೊಂದಿದರು_

ಕಮ್ಯುನಿಸ್ಟ್ ಚಳುವಳಿಯ ಕೇಂದ್ರವಾಗಿದ್ದ ಬಜಾಲ್ ಪಕ್ಕಲಡ್ಕ ಪರಿಸರದಲ್ಲಿ ಬೆಳೆದು ಬಂದಿರುವ ಕಮಲರವರು ಆ ಕಾಲದಲ್ಲಿ ನಡೆಯುತ್ತಿದ್ದ ರೈತ ಕಾರ್ಮಿಕರ ಹೋರಾಟದಲ್ಲಿ ಸ್ವಯಂಸ್ಪೂರ್ತಿಯಿಂದ ಭಾಗವಹಿಸುವ ಮೂಲಕ ಕಮ್ಯುನಿಸ್ಟ್ ಪಕ್ಷದ ಅಪ್ಪಟ ಅಭಿಮಾನಿಯಾಗಿ ಮೂಡಿ ಬಂದಿದ್ದರು.ಆ ಮೂಲಕ ತಮ್ಮ ಇಡೀ ಮನೆಯನ್ನೇ ಕಮ್ಯುನಿಸ್ಟ್ ಕುಟುಂಬವನ್ನಾಗಿ ಪರಿವರ್ತಿಸಿದರು.

ಸದ್ಯಕ್ಕೆ ಕಾಂ.ಕಮಲರವರ ಮನೆಯಲ್ಲಿ 7 ಮಂದಿ ಸಿಪಿಐ ಗಗನ (ಎಂ) ಸದಸ್ಯರಿದ್ದು, ಅದರಲ್ಲಿ ಮಕ್ಕಳಾದ ವಿಮಲ ಹಾಗೂ ಗುಲಾಬಿಯವರು ಅಳಪೆ ಪ್ರದೇಶ ಬೀಡಿ ಲೇಬರ್ ಯೂನಿಯನ್ ನ ಸಕ್ರೀಯ ಕಾರ್ಯಕರ್ತರಾದರೆ, ಮೊಮ್ಮಕ್ಕಳಾದ ಮಾಲಿನಿ, ಜಯಲಕ್ಷ್ಮಿ ಪಕ್ಷದ ಸದಸ್ಯರಾಗಿದ್ದಾರೆ. ಮೊಮ್ಮಗನಾದ ಸಂತೋಷ್ ಬಜಾಲ್ ಸಿಪಿಐ(ಎಂ,) ಜಿಲ್ಲಾ ಸಮಿತಿ ಸದಸ್ಯರು, ಡಿವೈಎಫ್ ಜಿಲ್ಲಾ ಕಾರ್ಯದರ್ಶಿಯಾಗಿದ್ದರೆ, ಇನ್ನೋರ್ವ ಮೊಮ್ಮಗ ಜಗದೀಶ್ ಬಜಾಲ್ ಸ್ಥಳೀಯ ಸಿಪಿಐ(ಎಂ) ಶಾಖಾ ಕಾರ್ಯದರ್ಶಿಯಾಗಿದ್ದಾರೆ. ಮತ್ತೋರ್ವ ಮೊಮ್ಮಗ ರಿತೇಶ್ ಬಜಾಲ್ ರವರು ಡಿವೈಎಫ್ಐ ನಾಯಕರಾಗಿದ್ದಾರೆ.ಉಳಿದ ಕುಟುಂಬದ ಸದಸ್ಯರು ಪಕ್ಕಲಡ್ಕ ಯುವಕ ಮಂಡಲ, ಬೀಡಿ ಕಾರ್ಮಿಕರ ಸಂಘಟನೆ,ಮಹಿಳಾ ಸಂಘಟನೆ, ಎಸ್ ಎಫ್‌ ಐ , ಡಿವೈಎಫ್ಐ ಮುಂತಾದ ಎಡಪಂಥೀಯ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ತನ್ನ ಯೌವ್ವನದಲ್ಲಿ ಪಕ್ಷದ ಎಲ್ಲಾ ಹೋರಾಟ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕಮಲರವರು ತನ್ನ ಇಳಿವಯಸ್ಸಿನಲ್ಲೂ ಪಕ್ಷದ ಕಾರ್ಯಕ್ರಮ ಹೋರಾಟಗಳನ್ನು ಕಂಡು ಪುಳಕಗೊಳ್ಳುತ್ತಿದ್ದರು. ಕೋರೋನಾ ಸಂದರ್ಭದಲ್ಲಿ ಉದ್ಯೋಗದ ಪ್ರಶ್ನೆಯನ್ನು ಮುಂದಿಟ್ಟು ಮನೆಮನೆ ಪ್ರತಿಭಟನೆಗೆ ಕರೆ ನೀಡಿದಾಗ ಕಾಂ.ಕಮಲರವರು ಸ್ವತಃ ತಾನು ಭಾಗವಹಿಸುವ ಮೂಲಕ ಯುವಜನತೆಗೆ ಸ್ಪೂರ್ತಿ ತುಂಬಿದ್ದರು.

ರಾಜ್ಯದಲ್ಲಿ ಐಸಿಡಿಎಸ್ ಯೋಜನೆ ಜಾರಿಗೊಂಡಾಗ ಪಕ್ಕಲಡ್ಕ ಯುವಕ ಮಂಡಲದಲ್ಲಿ ಪ್ರಾರಂಭಗೊಂಡ ಅಂಗನವಾಡಿ ಕೇಂದ್ರದಲ್ಲಿ ಸಹಾಯಕ ಕಾರ್ಯಕರ್ತೆಯಾಗಿ ಸೇರ್ಪಡೆಗೊಂಡ ಕಮಲರವರು ತನ್ನ ಜೀವನದ ಸುಧೀರ್ಘ ಅವಧಿಯಲ್ಲಿ ಪುಟಾಣಿ ಮಕ್ಕಳ ಸೇವೆ ಸಲ್ಲಿಸಿ ಮಕ್ಕಳ ಹಾಗೂ ಪೋಷಕರ ಪ್ರೀತಿಗೆ ಪಾತ್ರರಾಗಿದ್ದರು.

ತನ್ನ ವಿಶಾಲ ಕುಟುಂಬದ ಎಲ್ಲಾ ಸದಸ್ಯರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುವ ಮೂಲಕ ಇಡೀ ಕುಟುಂಬವನ್ನು ಒಂದಾಗಿ ಇಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂತಹ ತಾಯಿ ಹೃದಯದ ಕಾಂ.ಕಮಲರವರು ಕುಟುಂಬದಲ್ಲಿ, ನೆರೆಹೊರೆಯಲ್ಲಿ ಹಾಗೂ ಬಜಾಲ್ ಪರಿಸರದಲ್ಲಿ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದರು.ಒಟ್ಟಿನಲ್ಲಿ ಕಾಂ.ಕಮಲರವರ ನಿಧನವು ಬಜಾಲ್ ಕಂಕನಾಡಿ ಪ್ರದೇಶದ ಎಡಪಂಥೀಯ ಚಳುವಳಿಗೆ ತುಂಬಲಾರದ ನಷ್ಟವಾಗಿದೆ.

ಕಾಂ.ಕಮಲರವರ ನಿಧನಕ್ಕೆ ಸಿಪಿಐ(ಎಂ) ಡಿವೈಎಫ್ಐ, ಎಸ್ಎಫ್ಐ ಪಕ್ಕಲಡ್ಕ ಯುವಕ ಮಂಡಲ,ಜನತಾ ವ್ಯಾಯಾಮ ಶಾಲೆ,ಅಳಪೆ ಪ್ರದೇಶ ಬೀಡಿ ಲೇಬರ್ ಯೂನಿಯನ್ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top