ಕಾರ್ಕಳ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆ, ಜಿಲ್ಲಾ ಮಲೆಕುಡಿಯ ಸಂಘ (ರಿ.), ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಧಾರ್ ನೋಂದಣಿ, ನವೀಕರಣ ಮತ್ತು ತಿದ್ದುಪಡಿ ಶಿಬಿರವು ಕಬ್ಬಿನಾಲೆ ಮಲೆಕುಡಿಯ ಸಮುದಾಯ ಭವನದಲ್ಲಿ ಜರಗಿತು.
ಶಿಬಿರದಲ್ಲಿ ಪಾಲ್ಗೊಳ್ಳಲು 38 ಜನರು ಹೆಸರನ್ನು ನೊಂದಾಯಿಸಿದ್ದರು. ಬಾಕಿ ಉಳಿದ 08 ಮಂದಿ ಅಶಕ್ತರನ್ನು ಮುಂದಿನ ದಿನಗಳಲ್ಲಿ ಮನೆ ಮನೆಗೆ ತೆರಳಿ ನೋಂದಣಿ, ನವೀಕರಣ, ತಿದ್ದುಪಡಿಗಳನ್ನು ಮಾಡಲಾಗುವುದು.
ಜಿಲ್ಲಾಧ್ಯಕ್ಷ ಗಂಗಾಧರ ಗೌಡ, ಪ್ರಧಾನ ಕಾರ್ಯದರ್ಶಿ ಅಶೋಕ ಕೆರ್ವಾಶೆ, ಸಂಘಟನಾ ಕಾರ್ಯದರ್ಶಿ ಮನೋಹರ ಕಬ್ಬಿನಾಲೆ, ಸಹ ವಕ್ತಾರೆ ಸುಜಾತ , ಕಬ್ಬಿನಾಲೆ ಗ್ರಾಮ ಸಮಿತಿ ಅಧ್ಯಕ್ಷ ರಾಜು ಗೌಡ, ಉಪಾದ್ಯಕ್ಷೆ ಸುಂದರಿ, ಪ್ರಧಾನ ಕಾರ್ಯದರ್ಶಿ ಶಶಿಧರ, ಸಹ ಕಾರ್ಯದರ್ಶಿ ಸತೀಶ ಮತ್ತಾವು ಕೋಶಾಧಿಕಾರಿ ವಸಂತ, ಗೌರವ ಸಲಹೆಗಾರ ನಾರಾಯಣ ಗೌಡ ಅಲಂಗಾಡು, ಮೇಲ್ಮಟ ಹಿ.ಪ್ರಾ.ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷ ರವಿ ಪುಂಡಾಲು, ಆಧಾರ್ ಆಪರೇಟರ್ ಅಜಿತ್, ಶ್ರೀದೀಪ್ ಉಪಸ್ಥಿತಿದ್ದರು. ಮಲ್ಲಿಕಾ ಸ್ವಾಗತಿಸಿ, ನಿರೂಪಿಸಿದರು.

































