ಕನ್ಯಾಲು ಶ್ರೀ ಮುಜಿಲ್ನಾಯ ದೈವಸ್ಥಾನದ ಜೀಣೋದ್ಧಾರಕ್ಕೆ ನೆರವು -ಶಾಸಕ ವಿ.ಸುನೀಲ್ ಕುಮಾರ್

ಕಾರ್ಕಳ: ಈದು ಗ್ರಾಮದ ನೂರಲ್ಬೆಟ್ಟು ಕನ್ಯಾಲು ಶ್ರೀ ಮುಜಿಲ್ನಾಯ ದೈವಸ್ಥಾನದ ವಠಾರದಲ್ಲಿ ಜೀಣೋದ್ಧಾರದ ವಿಜ್ಞಾಪನಾ ಪತ್ರವನ್ನು ಶಾಸಕ ವಿ.ಸುನೀಲ್ಕುಮಾರ್ ಬಿಡುಗಡೆಗೊಳಿಸಿದರು.
ಪಶ್ವಿಮಘಟ್ಟದ ತಪ್ಪಲು ತೀರಾ ಪ್ರದೇಶವೆಂದು ಗುರುತಿಸಲಾಗಿರುವ ಈದು ನೂರಾಲ್ಬೆಟ್ಟುವಿನಲ್ಲಿ ಹಲವು ದಶಕಗಳಿಂದ ನೆನೆಗುದ್ದಿಗೆ ಬಿದ್ದಿದ ಧಾರ್ಮಿಕ ಹಿನ್ನಲೆಯ ಪುಣ್ಯ ಭೂಮಿಯಾಗಿರುವ ಶ್ರೀ ಮುಜಿಲ್ನಾಯ ದೈವಸ್ಥಾನ ಹಾಗೂ ಪರಿವಾರ ದೈವಗಳ ಗುಡಿಗಳನ್ನು ಪುನರ್ ನಿರ್ಮಾಣ ಮಾಡುವಂತಹ ಪುಣ್ಯದ ಕಾರ್ಯ ನಮ್ಮ ಪಾಲಿಗೆ ಒದಗಿದೆ. ದೈನಸ್ಥಾನವು ಪೂರ್ಣ ಪ್ರಮಾಣದಲ್ಲಿ ನಿರ್ಮಾಣದ ಅಂತಿಮ ಹಂತದ ವರೆಗೆ ವೈಯಕ್ತಿಕ ನೆಲೆಯಲ್ಲಿ ಹಾಘೂ ದಾನಿಗಳ ನೆರವಿನೊಂದಿಗೆ ಆರ್ಥಿಕ ಸಹಾಯ ಒದಗಿಸುವ ಭರವಸೆ ನೀಡಿದ್ದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಸಂತಭಟ್ ಮಾತನಾಡಿ, ಪಶ್ಚಿಮಘಟ್ಟದ ಪ್ರಕೃತಿಯ ಮಡಿಲಲ್ಲಿ ದೈವಸ್ಥಾನ ಜೀಣೋದ್ಧಾರಗೊಳ್ಳುತ್ತಿರುವುದು ಸನಾತನ ಧರ್ಮದ ಉಳಿವಿನ ಪೂರಕ ಕೈಂಕರ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ಡೀಕಯ್ಯ ಗೌಡ ಕನ್ಯಾಲು ವಹಿಸಿದರು.
ಈದು ಮುಜಿಲ್ನಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಕುಮಾರ್ ಜೈನ್, ಈದು ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಪೂಜಾರಿ, ನೆಲ್ಲಿಕಾರು ಸಹಕಾರಿ ಸಂಘದ ಅಧ್ಯಕ್ಷ ಜಯವರ್ಮ ಜೈನ್ ಮಾಪಾಲು, ವಿಜಯಕುಮಾರ್ ಕಂಗಿನಮನೆ, ಈದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುರುಷೋತ್ತಮ ಹೆಚ್., ಸುರೇಶ್ ಶೆಟ್ಟಿ ಹೊಸ್ಮಾರು, ಸನುದಾಯದ ಹಿರಿಯರಾದ ಅಣ್ಣಿಗೌಡ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕ ಕರುಣಾಕರ ಪ್ರಾರ್ಥಿಸಿದರು. ಶೀಧರ ಗೌಡ ಸ್ವಾಗತಿಸಿದರು. ರೆಂಜಾಳ ನೋಣಯ್ಯ ಗೌಡ ಪ್ರಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಗೌಡ ನಿರ್ವಹಿಸಿ, ಧನ್ಯವಾದವಿತ್ತರು.




















