








ಕನ್ನಡ ರಾಜೋತ್ಸವದಂದು ಪುರಸ್ಕೃತಗೊಂಡ ರಾಜಶೇಖರ್.ಪಿ ಶಾಮರಾವ್
ಉಡುಪಿ: ಸೈಂಟ್ ಮೇರಿಸ್ ದ್ವೀಪದಿಂದ ಮಲ್ಪೆಯ ಕಡಲ ತೀರದವರೆಗೆ 3.80 ಕಿಲೋಮಿಟರ್ ದೂರವನ್ನು ಅರಬ್ಬಿ ಸಮುದ್ರದ ಅಲೆಗಳಿಗೆ ಎದುರಾಗಿ ಈಜಿ ಸಾಧನೆಗೈದ ವಿಕಲಚೇತನ ರಾಜಶೇಖರ್ ಪಿ ಶಾಮರಾವ್ ಅವರ ಸಾಧನೆಯನ್ನು ಗುರುತಿಸಿರುವ ಜಿಲ್ಲಾಡಳಿತವು ಕನ್ನಡ ರಾಜ್ಯೋತ್ಸವ ಪುರಸ್ಕೃತ ನೀಡಿ ಗೌರವಿಸಿದೆ.
ಉಡುಪಿಯ ಅಜ್ಜರ ಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪುರಸ್ಕೃತ ನೀಡಲಾಯಿತು.
ರಾಜಶೇಖರ್ ಪಿ ಶಾಮರಾವ್ ಅವರು ತಾಲೂಕು, ಜಿಲ್ಲಾ,ರಾಜ್ಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಕ್ರೀಡಾ ಕ್ಷೇತ್ರದ ಅಪ್ರತಿಮ ಸಾಧನೆಗಾಗಿ ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗ ಡಾ. ಕೆ ವಿದ್ಯಾಕುಮಾರಿ, ಇತರ ಅತಿಥಿಗಳ ಸಮ್ಮುಖದಲ್ಲಿ ಉಡುಪಿ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
































