ಕನಸುಗಳಿಗೆ ಅದ್ಭುತ ರೂಪ ಕೊಡುವ
ರುದ್ರಾಂಶ ಕನ್ಸ್ಟ್ರಕ್ಷನ್, ಮೂಡುಬಿದಿರೆ








ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಹೆಸರಾಗಿರುವ “ರುದ್ರಾಂಶ ಕನ್ಸ್ಟ್ರಕ್ಷನ್“ ಮೂಡುಬಿದಿರೆ, ಸ್ಥಾಪನೆಯಾದ ಕಡಿಮೆ ವರ್ಷಗಳಲ್ಲಿಯೇ ದ. ಕ. ಮತ್ತು ಉಡುಪಿ ಜಿಲ್ಲೆಯಾದ್ಯಂತ ಬಹಳ ಪ್ರಸಿದ್ಧಿಯನ್ನು ಗಳಿಸಿರುತ್ತದೆ.
ಕಟ್ಟಡ ನಿರ್ಮಾಣಕ್ಕೆ ಬಳಸುವ ಅತ್ಯುತ್ತಮ ಗುಣಮಟ್ಟದ ಸಾಮಗ್ರಿಗಳು ಮತ್ತು ಯೋಗ್ಯ ಪರಿಣತರ ಬಳಕೆಯಿಂದಾಗಿ ಯಾವುದೇ ಬಗೆಯ ಹೊಂದಾಣಿಕೆಗೆ ಅವಕಾಶ ಮಾಡಿಕೊಳ್ಳದೆ “ರುದ್ರಾಂಶ ಕನ್ಸ್ಟ್ರಕ್ಷನ್“ ತನ್ನ ಸ್ಥಾಪಿತ ಮೂಲೋದ್ದೇಶವನ್ನು ಭದ್ರವಾಗಿ ನೆಲೆಯೂರಿಸಿಕೊಂಡು ಬರುತ್ತಿರುವುದೇ ನಿರ್ಮಾಣ ಕ್ಷೇತ್ರದಲ್ಲಿ ಅದ್ಭುತ ಶ್ಲಾಘನೆಯನ್ನು ಪಡೆಯುವುದಕ್ಕೆ ಸಾಧ್ಯವಾಗಿದೆ.
2022ರಲ್ಲಿ ಪ್ರಾರಂಭಗೊಂಡ “ರುದ್ರಾಂಶ ಕನ್ಸ್ಟ್ರಕ್ಷನ್“, ಕಟ್ಟಡ ನಿರ್ಮಾಣದ ಜೊತೆಯಲ್ಲಿ ಒಳಾಂಗಣ ವಿನ್ಯಾಸವನ್ನೂ ಪ್ರಾರಂಭಿಸಿತು. ಬೇಡಿಕೆಗೆ ಅನುಗುಣವಾಗಿ, ಮನಸಿನ ಕಲ್ಪನೆಗೆ ನನಸಿನ ವಿನ್ಯಾಸವನ್ನು ಪಡಿಮೂಡಿಸಲು ಮುಂಬೈ,ಕೇರಳ ಮುಂತಾದ ರಾಜ್ಯಗಳಿಂದ ಪರಿಣತರನ್ನು ಆಹ್ವಾನಿಸಿ ನಿರ್ಮಾಣದ ಪರಿಪೂರ್ಣತೆಯನ್ನು ಸಾಕ್ಷೀಕರಿಸುವಲ್ಲಿ ಯಶಸ್ಸು ಕಾಣುವುದರೊಂದಿಗೆ ಗುರಿ ತಲುಪುವುದಾಗಿರುತ್ತದೆ.
ನಿರ್ಮಾಣ ಹಾಗೂ ಅಭಿವೃದ್ಧಿ ಕ್ಷೇತ್ರದಲ್ಲಿಯೂ “ರುದ್ರಾಂಶ ಕನ್ಸ್ಟ್ರಕ್ಷನ್“ ತನ್ನದೇ ಆದ ಗೆಲುವಿನ ಹೆಜ್ಜೆಯಿಟ್ಟುಕೊಂಡು ಜನರ ಮನಗೆಲ್ಲುವಲ್ಲಿ ಸಾರ್ಥಕತೆ ಕಂಡಿರುತ್ತದೆ.
ವಾಣಿಜ್ಯಸಂಕೀರ್ಣಗಳು, ವಾಸಯೋಗ್ಯ ಕನಸಿನ ಮನೆಗಳು ,ಪರಿಸರದ ನಿರ್ಮಾಣ ಯೋಜನೆಗಳಿಂದಾಗಿ “ರುದ್ರಾಂಶ ಕನ್ಸ್ಟ್ರಕ್ಷನ್” ಜನಮನದಲ್ಲಿ ಶಾಶ್ವತ ಜಾಗ ಪಡೆದುಕೊಂಡಿದೆ.
ಕಟ್ಟಡಗಳ ವಿನ್ಯಾಸ ಹಾಗೂ ಒಳಾಂಗಣದ ಅಂದಚೆಂದಗಳ ರಚನೆಯಲ್ಲಿ ಅದ್ಭುತ ವೈಶಿಷ್ಠ್ಯಗಳನ್ನು ಅಳವಡಿಸುವುದಕ್ಕಾಗಿ ಮುಂಬೈ ಮತ್ತಿತರ ನಗರದಲ್ಲಿರುವ ಅಭಿಯಂತರುಗಳ ಸೇವೆಗಳನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ. ಸ್ಪರ್ಧಾತ್ಕವಾದ ಈ ಕ್ಷೇತ್ರದಲ್ಲಿ ಕೇವಲ ಕಡಿಮೆ ಅವಧಿಯಲ್ಲೇ ಯಶಸ್ಸಿನ ಹೆದ್ದಾರಿಯನ್ನು ತಲುಪಿರುವುದು ಅದರ ಕೆಲಸದಲ್ಲಿನ ಸಾಚಾತನದಿಂದ ಒದಗಿಬಂದ ಸ್ವಾಗತವಾಗಿದೆ.
ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ “ರುದ್ರಾಂಶ ಕನ್ಸ್ಟ್ರಕ್ಷನ್“ ತನ್ನದೇ ಆದ ಪಾರದರ್ಶಕತೆಯ ಕಾರಣದಿಂದ ವಿಸ್ತಾರಗೊಳ್ಳುತ್ತವಿರುವುದು ಹೆಮ್ಮೆಯ ವಿಚಾರ.
ಈ ನಿರ್ಮಾಣ ಉದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯೆ ಅತಿ ಹೆಚ್ಚು ಮತ್ತು ಎಲ್ಲ ಅನುಕೂಲಕರ ವ್ಯವಸ್ಥೆಗಳು, ಸಾಧನಗಳು,ಪರಿಣತರು ಅತಿ ಮುಖ್ಯವಾಗಿರುವುದರಿಂದ ಆ ಎಲ್ಲವನ್ನೂ “ರುದ್ರಾಂಶ ಕನ್ಸ್ಟ್ರಕ್ಷನ್“ ಸಂಪೂರ್ಣವಾದ ರೀತಿಯಲ್ಲಿ ಹೊಂದಿಕೊಂಡಿರುತ್ತದೆ. ಆ ಹಿರಿಮೆಯಿಂದಾಗಿ ಯಾವುದೇ ಸಣ್ಣ ಮತ್ತು ದೊಡ್ಡ ನಿರ್ಮಾಣವೂ ಸಹ ನಿಗದಿತ ಅವಧಿಯಲ್ಲೇ ಪೂರ್ಣಗೊಳ್ಳುತ್ತಿರುವ ಪ್ರಶಂಸೆಗೆ ಪಾತ್ರವಾಗಲು ಸಾಧ್ಯವಾಗಿದೆ. ಅಜಯ್ ಶೆಟ್ಟಿಯವರ ಒಡೆತನದ “ರುದ್ರಾಂಶ ಕನ್ಸ್ಟ್ರಕ್ಷನ್“ಒಂದು ಪರಿಪೂರ್ಣವಾದ ಕಟ್ಟಡ ನಿರ್ಮಾಣ ಸಂಸ್ಥೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
-ವಿ. ಕೆ. ವಾಲ್ಪಾಡಿ


























