ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ತುಲಾಭಾರ ಸೇವೆ
ಮೂಡುಬಿದಿರೆ : ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ಎಂ. ಮೋಹನ ಆಳ್ವರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ತುಲಾಭಾರ ಸೇವೆ ನಡೆಯಿತು.

ಡಾ. ಮೋಹನ ಆಳ್ವ ಅವರಿಗೆ ಕಳೆದ ವರ್ಷ ಆರೋಗ್ಯದಲ್ಲಿ ಏರುಪೇರಾದ ಸಂದರ್ಭದಲ್ಲಿ ಅವರ ಆಯುರಾರೋಗ್ಯಕ್ಕಾಗಿ ಉದ್ಯಮಿ ಕೆ. ಶ್ರೀಪತಿ ಭಟ್ ಹರಕೆಯನ್ನು ಹೇಳಿದ್ದರು.
ನವೆಂಬರ್ 18 ರಂದು ಶ್ರೀ ದೇವಿಯ ಸನ್ನಿಧಿಯಲ್ಲಿ ಹರಕೆಯನ್ನು ಒಪ್ಪಿಸಲಾಯಿತು.
ಡಾ. ಎಂ. ಮೋಹನ ಆಳ್ವರ ಕುಟುಂಬ ಸದಸ್ಯರು ಮತ್ತು ಕೆ. ಶ್ರೀಪತಿ ಭಟ್ ಅವರ ಕುಟುಂಬ ಸದಸ್ಯರು ಹಾಗೂ ಮೋಹನ ಆಳ್ವರ ಸಮೀಪ ಬಂಧುಗಳು ಕೆಲವರು ಈ ಸಂದರ್ಭ ಉಪಸ್ಥಿತರಿದ್ದರು.
ವೇದಮೂರ್ತಿ ಕಟೀಲು ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರು ತುಲಾಭಾರ ಸೇವೆ ನಡೆಸಿಕೊಟ್ಟು ಎರಡೂ ಕುಟುಂಬಗಳ ಸದಸ್ಯರಿಗೆ ಶ್ರೀ ದೇವಿಯ ಪ್ರಸಾದ ನೀಡಿ ಹರಸಿದರು.




































