ಕಂಬಳ ಲೋಕದಲ್ಲಿ…ರಮ್ಯ ನಿತ್ಯಾನಂದ ಶೆಟ್ಟಿ

Picture of RB NEWS

RB NEWS

Bureau Report

ಬಂಟ್ವಾಳ : ರಮ್ಯ ನಿತ್ಯಾನಂದ ಶೆಟ್ಟಿ ಗುಬ್ಬಚ್ಚಿಗೂಡು ಇವರ ಚೊಚ್ಚಲ ಕೃತಿ.

2019-20ರಲ್ಲಿ ಜೀವ ವೈವಿಧ್ಯಗಳ ಛಾಯಾಗ್ರಹಣ ಕ್ಲಿಕಿಸುತ್ತಿದ್ಧ ರಮ್ಯ, ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧವಾದ ಹೊಕ್ಕಾಡಿಗೋಳಿ ವೀರ- ವಿಕ್ರಮ ಜೋಡುಕರೆ ಕಂಬಳವನ್ನು ವೀಕ್ಷಿಸಿ, ಕಂಬಳ ಲೋಕದ ಬಗ್ಗೆ ಒಂದು ಪುಸ್ತಕ ಬರೆಯಬಹುದು ಯೋಚನೆ ಹಾಕಿಕೊಂಡಿದ್ದರು.

ಪತಿ ನಿತ್ಯಾನಂದ ಶೆಟ್ಟಿಯವರಲ್ಲಿ ಅದರ ಕುರಿತು ಪ್ರಸ್ತಾಪ ಇಟ್ಟಾಗ ನಗುವಿನಲ್ಲಿಯೇ ಸಮ್ಮತಿ ದೊರಕಿತು.

ಅಂದಿನಿಂದ ಪ್ರತಿ ಶನಿವಾರ ಮತ್ತು ಭಾನುವಾರ ಕಂಬಳ ಕೂಟದಲ್ಲಿ ಪ್ರೇಕ್ಷಕರಾಗಿ ಛಾಯಾಗ್ರಹಣ ಸೆರೆ ಹಿಡಿಯಲು ಆರಂಭಿಸಿ ಕಂಬಳ ಲೋಕದ ದಾಖಲೀಕರಣಕ್ಕೆ ಇಳಿದರು.

ತದನಂತರ ಕಂಬಳ ಲೋಕದಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದ ಸರ್ವರನ್ನು ಪರಿಚಯಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ‘ಸಾಧಕರ ಪರಿಚಯ’ ಸರಣಿ ಮಾಲಿಕೆಯನ್ನು ಆರಂಭಿಸಿದ ರಮ್ಯ ಅವರು, ಪುಸ್ತಕ ರೂಪದಲ್ಲಿಯೂ ಇವರ ದಾಖಲೆ ಇರಬೇಕೆಂದು ಬಯಸಿ ಎಲ್ಲಾ ಲೇಖನಗಳನ್ನು ಒಟ್ಟು ಸೇರಿಸಿದರ ಶ್ರಮವೇ ಈ ಹೊತ್ತಗೆ.ಅದು ಕಂಬಳ ಲೋಕದಲ್ಲಿ ಎನ್ನುವ ಚೊಚ್ಚಲ ಕೃತಿಯಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top