ಕಂಬಳ ಕೋಣಗಳ ಸಾಕು ಮಾಲಕ ಉಮೇಶ್ ಶೇರ್ವೆಗಾರ್

Picture of RB NEWS

RB NEWS

Bureau Report

ಕಂಬಳದ ಮಾಲಕ ಉಮೇಶ್ ಶೇರ್ವೆಗಾರ್

ಕಾರ್ಕಳ !  ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ.  ಇದು ಕರಾವಳಿ ಕರ್ನಾಟಕದ ಒಂದು ಜನಪದ.  ದಷ್ಟಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದಮಾಡಿ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ.  ಕಂಬಳ ಕೋಣಗಳನ್ನು ಸಾಕುವುದೆಂದರೆ ಅದು ಸಾಮಾನ್ಯವಲ್ಲ.  ಒಳ್ಳೆಯ ಜಾತಿಯ ಕೋಣವನ್ನು ಆರಿಸಿ, ಚೆನ್ನಾಗಿ ಆರೈಕೆ ಮಾಡಿ ಕಂಬಳಕ್ಕೆ ತಯಾರು ಮಾಡುವುದು, ಅದನ್ನು ಓಡಿಸಲು ಬೇಕಾದ ಜನವನ್ನು ತಯಾರು ಮಾಡುವುದು ಕೋಣನ ಯಜಮಾನನಿಗೆ ಅಗತ್ಯ.  ಇದು ಹೆಚ್ಚಿನ ಖರ್ಚಿನೊಂದಿಗೆ ಪ್ರತಿಷ್ಠೆಯ ಸಂಕೇತವೂ ಹೌದು.

ಕಳೆದ 25ವರ್ಷಗಳಿಂದಲೂ ಇದೇ ರೀತಿ ಕೃಷಿ ವೃತ್ತಿಯೊಂದಿಗೆ ಕೋಣಗಳನ್ನು ಸಾಕುತ್ತಿರುವವರು ಉಮೇಶ್ ಶೇರ್ವೆಗಾರ್ ಹಿತ್ಲುಮನೆ, ಅಂಡಾರು.
ಕೃಷಿಕ ಕುಟುಂಬದ .ಚಿನ್ನಯ ಶೇರ್ವೆಗಾರ್ ಮತ್ತು ಸರಸ್ವತಿ ದಂಪತಿಗಳ ಮಗನಾಗಿ ಜನಿಸಿದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷ ನಡೆಯುವ ಪ್ರತಿಷ್ಠಿತ ಕಂಬಳ‌ ಸ್ಪರ್ಧೆಗಳಾದ ಮಿಯಾರು, ಬಾರಾಡಿ, ಐಕಳ,ಅಡ್ವೆ, ಮೂಲ್ಕಿ, ವೇಣೂರು ಮುಂತಾದ ಹಲವು ಕಡೆಗಳಲ್ಲಿ ಕೋಣಗಳನ್ನು ಓಡಿಸಿ ಸೆಮಿಫೈನಲ್ ಹಂತದಲ್ಲೂ ಭಾಗವಹಿಸಿರುವುದು ಗಮನಾರ್ಹ.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top