ಕಂಪೆನಿ ಸೆಕ್ರೇಟರಿ ಪ್ರವೇಶ ಪರೀಕ್ಷೆ : 28 ಮಂದಿಗೆ ಅತ್ಯುತ್ತಮ ಅಂಕದ ಗರಿ: ಜ್ಞಾನಸುಧಾ ವಿದ್ಯಾರ್ಥಿಗಳ ಸಾಧನೆ

Picture of RB NEWS

RB NEWS

Bureau Report

ಕಾರ್ಕಳ: ಇನ್ಸಿಟ್ಯೂಟ್‌ ಆಫ್ ಕಂಪನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು ನಡೆಸಿದ ಸಿ.ಎಸ್.ಇ.ಇ.ಟಿ (ಕಂಪೆನಿ ಸೆಕ್ರೇಟರಿ ಎಕ್ಸಿಕ್ಯೂಟಿವ್‌ ಎಂಟ್ರೆನ್ಸ್ ಟೆಸ್ಟ್) ನಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ವಾಣಿಜ್ಯ ವಿಭಾಗದ 32 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 28 ವಿದ್ಯಾರ್ಥಿಗಳು ಅತ್ಯುತ್ತಮ ರಕ್ತಾ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯಕು, ರಕ್ಷಾ ರಾಮಚಂದ್ರ ಅವರು 200ರಲ್ಲಿ 163 ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಯಾಗಿರುತ್ತಾರೆ.

ಜೊತೆಗೆ ಖತಿಜಾತುಲ್ ರಾಫಿಯಾ, ಹೃಷಿಕೇಶ್ ಸತೀಶ್ ಶೆಟ್ಟಿ, ಮ್ಯಾಕ್ಸಿನ್ ಜಾಕ್‌ ಡಿಮೆಲ್ಲೊ, ಶ್ರೀಧಾ ಶೆಟ್ಟಿ, ರಕ್ಷಿತಾಜನೆ, ಶೋಧನ್‌ ಕುಮಾರ್ ಶೆಟ್ಟಿ, ಪ್ರಜಿಶ್ ಕುಲಾಲ್, ಶ್ರಾವಂತ್‌ ಕುಮಾರ್ ಶೆಟ್ಟಿ, ಪ್ರಥಮ್ ನಾಯಕ್, ರಕ್ಷಿಸ್‌ಆರ್, ಪ್ರಜನ್, ಆಜಯ್ ಡಿ. ನಾಯಕ್, ಆಯುಶ್ ಶೆಟ್ಟಿ, ನಮೀನ್ ಶೆಟ್ಟಿ, ವಿಶ್ವೇಶ್, ಕೆ.ಅಂಕಿತಾ ಪೈ, ಪ್ರೇರಣಾ ಸುನಿಲ್ ಕುಮಾರ್, ಸಮರ್ಥ್ ವಿಜಯ್‌ ದೇವಾಡಿಗ, ಆಪೇಕ್ಷಾ, ಹುದಾಹಮ್ರಾ, ಕಾವ್ಯ ಸಲ್ಲಾಮುತು, ರಾಜೇಂದ್ರಎನ್, ಮಲ್ಯಾ, ಶುಧಿನ್ ಶೆಟ್ಟಿ, ಸುಭೀಶ್, ಸುವೀಕ್ಷಾ, ವಿಶ್ವಾಸ್ ನಾಯ್ ಮತ್ತು ಯಶಸ್ವಿನಿ ಸೇರಿದಂತೆ ಒಟ್ಟು 28 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.

ಈ ಸಾಧನೆಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್‌ಶೆಟ್ಟಿ ಹಾಗೂ ಜ್ಞಾನಸುಧಾ ಪರಿವಾರದ ಸದಸ್ಯರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top