ಓವರ್ ಟೇಕ್ ಭರದಲ್ಲಿ ಕಾರು ಪಲ್ಟಿ

Picture of RB NEWS

RB NEWS

Bureau Report

ಕಾರ್ಕಳ : ಕಾರ್ಕಳ- ಹೆಬ್ರಿ ನಡುವೆ ಹಾದು ಹೋಗಿರುವ ರಾಜ್ಯ ಹೆದ್ದಾರಿ ಮುನಿಯಾಲು ಎಂಬಲ್ಲಿ ಓವರ್ ಟೇಕ್ ಭರದಲ್ಲಿ ಕಾರೊಂದು ರಸ್ತೆ ವಿಭಜಕದಿ ಮೇಲೆ ಪಲ್ಟಿ ಹೊಡೆದಿದೆ.

ಕಾರ್ಕಳ ಕಡೆಯಿಂದ ಹೆಬ್ರಿಗೆ ಹೋಗುವ ರಾಜ್ಯ ಹೆದ್ದಾರಿ ಮುನಿಯಾಲಿನ ಚತುಷ್ಪಥ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.

ಯುವಕರ ಕೂಡಿಕೊಂಡು ಹೋಗುತ್ತಿದ್ಧ ಎರಡು ಕಾರುಗಳ ನಡುವೆ ಓವರ್ ಟೇಕ್ ನಡೆದಿದ್ದು, ಇನ್ನೊಂದು ಕಾರಿನ ಚಾಲಕ ಹಿಂಬದಿಯಿಂದ ಬರುತ್ತಿದ್ದ ಕಾರಿಗೆ ಸೈಡ್ ನೀಡದೇ ಇದ್ದುದು ಘಟನೆಗೆ ಕಾರಣವೆನ್ನಲಾಗಿದೆ.

ಮುನ್ನುಗ್ಗುವ ಭರದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು ಪಲ್ಟಿ ಹೊಡೆದಿದ್ದು, ಕಾರಿನೊಳಗಿದ್ದವರಿಗೆ ಸಣ್ಣಪುಟ್ಟ ರೀತಿಯಲ್ಲಿ ಗಾಯವಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top