ಒಂದು ಮಗುವಿನ ತಾಯಿ ನಿಗೂಢ ನಾಪತ್ತೆ!
ಕಾರ್ಕಳ: ಪುಟ್ಟ ಮಗುವನ್ನು ಅತ್ತೆಯ ಮನೆಯಲ್ಲಿ ಬಿಟ್ಟು ಆಸ್ಪತ್ರೆಗೆಂದು ತೆರಳಿದ ಮಹಿಳೆ ನಿಗೂಢ ರೀತಿಯಲ್ಲಿ ನಾಪತ್ತೆಯಾದ ಘಟನೆ ಮುಡಾರು ದಿಡಿಂಬಿರಿಯ ಸನಾ ಮಂಜಿಲ್ನಲ್ಲಿ ನಡೆದಿದೆ.
ಮಿಯ್ಯಾರು ನೆಲ್ಲಿಗುಡ್ಡೆಯ ಶಾಬುದ್ದೀನ್ ಎಂಬವರ ಪತ್ನಿ ಉಮ್ಮಿಸೆಲ್ಮ(23) ನಿಗೂಢ ರೀತಿಯಲ್ಲಿ ನಾಪತ್ತೆಯಾದವಳು.
ಗಂಡ ವಿದೇಶದಲ್ಲಿ ಇದ್ದು, ಪತ್ನಿ ಉಮ್ಮಿಸೆಲ್ಮ ಎಂಬಾಕೆ ತನ್ನ 2 ವರ್ಷ ಹರೆಯದ ಗಂಡು ಮಗುವಿನೊಂದಿಗೆ ಗಂಡನ ಮನೆಯಲ್ಲಿ ವಾಸವಾಗಿದ್ದಳು.
ಜುಲಾಯಿ 2ರಂದು ಉಮ್ಮಿಸೆಲ್ಮ ತನ್ನ ಅತ್ತೆಯಾದ ಮುಡಾರು ದಿಡಿಂಬಿರಿಯ ಶಪ್ಪುನ್ನೀಸ್ ಜೊತೆಯಲ್ಲಿ ಜೋಡುಕಟ್ಟೆಯ ಸ್ವರ್ಣ ಸಹಕಾರಿ ಬ್ಯಾಂಕ್ನಿಂದ ರೂ.50,000 ಹಣವನ್ನು ಸಾಲವಾಗಿ ಪಡೆದಿದ್ದಳು. ಅಲ್ಲಿಂದ ಉಮ್ಮಿಸೆಲ್ಮ ಹಾಗೂ ಆಕೆಗೆ ಗಂಡು ಮಗು ನೇರವಾಗಿ ಮುಡಾರಿನ ದಿಡಿಂಬಿರಿಯ ಶಾನ ಮಂಜಿಲ್ನ ಅತ್ತೆ ಶಪ್ಪುನ್ನೀಸ್ ಅವರ ಮನೆಗೆ ಬಂದಿದ್ದಳು. ಅಲ್ಲಿ ತನ್ನ ಮಗುವನ್ನು ಬಿಟ್ಟು ಕಾರ್ಕಳ ನಗರದ ಗಾಜರಿಯಾ ಆಸ್ಪತ್ರೆ ಹಾಗೂ ಎಲ್ಐಸಿ ಕಚೇರಿಗೆಂದು ತನ್ನ ಗಂಡನ ಅಧೀನದಲ್ಲಿ ಇರುವ ಕೆಎ-20 ಹೆಚ್ಡಿ 6868 ನಂಬ್ರದ ದ್ವಿಚಕ್ರ ಮೋಟಾರ್ ವಾಹನದಲ್ಲಿ ಹೊರಟು ಹೋದವಳು ಇನ್ನೂ ಮನೆಗೆ ಬಂದಿಲ್ಲ.
ಈ ನಡುವೆ ಉಮ್ಮಿಸೆಲ್ಮಳಲ್ಲಿ ಇದ್ದ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಕುರಿತು ನಾಪತ್ತೆಯಾದ ಮಹಿಳೆಯ ಗಂಡ ಶಾಬುದ್ಧೀನ್ ಹಾಗೂ ಸಂಬOಧಿಕ ಮನೆಗಳಿಗೆ ಮಾಹಿತಿ ರವಾಹಿಸಿ ಯಾವುದೇ ಸುಳಿವು ಲಭ್ಯವಿಲ್ಲದೇ ಕಾರ್ಕಳ ಗ್ರಾಮಾಂತರ ಠಾಣೆಗೆ ಮುಡಾರು ದಿಡಿಂಬಿರಿಯ ಶಾನ ಮಂಜಿಲ್ನ ಶಪ್ಪುನ್ನೀಸ್ ದೂರು ನೀಡಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕೆ ಎಎಸೈಯ ದತ್ತುಮಗಳು !
ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಉಮ್ಮಿಸೆಲ್ಮ(23) ಬೆಳುವಾಯಿ ಮನೆತನದವರಾದ ಎಎಸೈ ಅಬ್ದುಲ್ ರಹಮಾನ್ ಅವರ ದತ್ತುಮಗಳು. ಎಎಸೈ ಅಬ್ದುಲ್ ರಹಮಾನ್ ಅವರು ಕಾರ್ಕಳ ನಗರ ಠಾಣೆಯಲ್ಲಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.
ಅಬ್ದುಲ್ ರಹಮಾನ್ ಅವರಿಗೆ ಮೊದಲ ವಿವಾಹವಾಗಿದ್ದು, ಅದರಲ್ಲಿ ಓರ್ವ ಪುತ್ರನಿದ್ದಾನೆ. ತನ್ನ ಜೀವಿತಾವಧಿಯಲ್ಲಿ ಪತ್ನಿ ತೀರಿಕೊಂಡಿದ್ದರೆನ್ನಲಾಗಿದ್ದು, ನಂತರ 2ನೇ ವಿವಾಹವಾಗಿದ್ದರು. ಈ ನಡುವೆ ಉಮ್ಮಿಸೆಲ್ಮಳನ್ನು ದತ್ತು ಮಗಳಾಗಿ ಸ್ವೀಕರಿಸಿದರು.
ಸಾಕಿ, ಸಲುಹಿ,ವಿದ್ಯಾಭ್ಯಾಸ ನೀಡಿದ ಅಬ್ದುಲ್ ರಹಮಾನ್ ನಿಧನರಾದ ಬಳಿಕ ಅದರ ಸಂಪೂರ್ಣ ಜವಾಬ್ದಾರಿಯನ್ನು ಅವರ ಸಹೋದರ ಅಬ್ದುಲ್ ಖಾದರ್ ವಹಿಸಿಕೊಂಡು ಕಳೆದ ಮೂರು ವರ್ಷದ ಹಿಂದೆ ಉಮ್ಮಿಸೆಲ್ಮಳನ್ನು ಮಿಯ್ಯಾರು ನೆಲ್ಲಿಗುಡ್ಡೆಯ ಶಾಬುದ್ದೀನ್ನೊಂದಿಗೆ ಸಾಂಪ್ರದಾಯಕವಾಗಿ ವಿವಾಹ ಮಾಡಿಕೊಡಲಾಗಿತ್ತು.





































