ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ, ಆರೋಗ್ಯ ಸೌಲಭ್ಯಗಳ ಮಾಹಿತಿ
ಮೂಡುಬಿದಿರೆ : ಒಂಟಿಕಟ್ಟೆ ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಫೆ.03ರಂದು ಕನ್ನಡ ಮಾಧ್ಯಮದ ಸೌಲಭ್ಯಗಳ, ಆರೋಗ್ಯ ಕಾಪಾಡಿಕೊಳ್ಳಲು ಮಾಹಿತಿಯನ್ನು ನೀಡಲಾಯಿತು.
ಬೆಂಗಳೂರು ಸೂರ್ಯ ಫೌಂಡೇಶನ್ ನ ಜಿಲ್ಲಾ ಸಂಯೋಜಕ, ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಮೂಡುಬಿದಿರೆ ಮಾಹಿತಿಯನ್ನು ನೀಡಿದರು.
ಅವರು ತಮ್ಮ ಭಾಷಣದಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯ ತನಕ ನಿರಂತರವಾಗಿ ಕನ್ನಡ ಮಾಧ್ಯಮದಲ್ಲಿಯೇ ಕಲಿಯುವುದರಿಂದ ಸರ್ಕಾರದ ಕನ್ನಡ ಕೃಪಾಂಕ ಪಡೆದು ಇತರರಿಗಿಂತ ಆದ್ಯತೆಯಲ್ಲಿ ಮೊದಲು ಸ್ಥಾನ, ಹುದ್ದೆ ಪಡೆಯಲು ಸಾಧ್ಯವಿದೆ ಎಂದರು.
ಯಾವುದೇ ಆಹಾರ ಸೇವಿಸುವ ಮೊದಲು ಅದನ್ನು ಸರಿಯಾಗಿ ನೋಡಿ ಸೇವಿಸ ಬೇಕು ಎಂದು ಹಲವಾರು ಉದಾಹರಣೆಗಳ ಮೂಲಕ ಮನವರಿಕೆ ಮಾಡಿಕೊಟ್ಟರು. ಅದೇ ರೀತಿ ಸಾಧ್ಯವಾದಷ್ಟು ರಾಸಾಯನಿಕ ಬಳಸದ ಆಹಾರವನ್ನು ಸ್ವತಃ ಬೆಳೆದು ಉಪಯೋಗಿಸಲು ಹೆತ್ತವರಿಗೆ ಸಹಕರಿಸಬೇಕೆಂದು ಕೇಳಿಕೊಂಡರು.




































