ಒಂಟಿಕಟ್ಟೆಯಲ್ಲಿ ಗಣೇಶೋತ್ಸವ

Picture of RB NEWS

RB NEWS

Bureau Report

ಮೂಡುಬಿದಿರೆ: ಇಲ್ಲಿಗೆ ಸಮೀಪದ ಒಂಟಿ ಕಟ್ಟೆಯ ಗಣೇಶೋತ್ಸವ ಸಮಿತಿಯ ವತಿಯಿಂದ ಆಚರಿಸಲಾಗುತ್ತಿರುವ 35ನೇ ವರ್ಷದ ಗಣೆಶೋತ್ಸವವು ಸೆಪ್ಟೆಂಬರ್ 7 ಶನಿವಾರ ಬೆಳಗ್ಗೆ ಗಂ. 9ಕ್ಕೆ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭವಾಗಲಿದೆ.

ಮಧ್ಯಾಹ್ನ ವಿವಿಧ ಮನೋರಂಜನೆ ಹಾಗೂ ನೃತ್ಯ ಕಾರ್ಯಕ್ರಮ ಜರಗಲಿದೆ. ರಾತ್ರಿ ಗೆಂದಗಿಡಿ ನಾಟಕ ಇದೆ ಪ್ರದರ್ಶನ ಏರ್ಪಡಿಸಲಾಗಿದೆ.

ಮರುದಿನ ಬೆಳಗ್ಗೆ ಕುಕ್ಷಿ ಮಹಾ ಗಣಪತಿ ಯಾಗ, ಮಧ್ಯಾಹ್ನ ತುಳು ಯಕ್ಷಗಾನ ಕುಸಲ್ದ ಪರ್ಬ, ರಾತ್ರಿ ಯೇರ್ ತುಳು ಹಾಸ್ಯ ನಾಟಕ ನಡೆಯಲಿದೆ.

ಸೆಪ್ಟೆಂಬರ್ 9 ಸೋಮವಾರ ಬೆಳಗ್ಗೆ ತ್ರೀ ನಾರಿಕೇಲ ಅಷ್ಟ ದ್ರವ್ಯ ಗಣಯಾಗ, ಸಂಜೆ 5.30 ಕ್ಕೆ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top