ಕಾರ್ಕಳದ ಪಡುತಿರುಪತಿ ದೇವಳದ ಅಧೀನಕ್ಕೊಳಪಡುವ ಎಸ್.ವಿ.ಟಿ ವನಿತಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ರಾಜ್ಯನೀತಿ ಶಾಸ್ತ್ರ ಉಪನ್ಯಾಸಕ ನೇಮಿರಾಜ್ ಶೆಟ್ಟಿ ಅಧಿಕಾರ ಸ್ವೀಕರಿಸಿದ್ದಾರೆ. ನೇಮಿರಾಜ್ ಶೆಟ್ಟಿ ಅವರು ಮಂಗಳೂರು ಕೊಂಚಾಡಿ ಲ್ಯಾಂಡ್ ಲಿಂಕ್ ಬಡಾವಣೆಯ ನಿವಾಸಿಯಾಗಿದ್ದಾರೆ.

ಪ್ರಾಂಶುಪಾಲ ರಾಮದಾಸ ಪ್ರಭು ವಯೋ ನಿವೃತ್ತಿ ಹೊಂದಿದ್ದಿ, ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ವಿದ್ಯಾಸಂಸ್ಥೆಯ ಆಡಳಿತ ವರ್ಗ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನೆರವೇರಿತು.

































