ಎಸ್ ಡಿ ಪಿ ಐಯ ಪೋಷಕರೇ ಕಾಂಗ್ರೆಸ್ಸಿಗರು : ವಿ.ಸುನೀಲ್ ಕುಮಾರ್

Picture of RB NEWS

RB NEWS

Bureau Report

ಎಸ್ ಡಿಪಿಐ ವಿಚಾರದಲ್ಲಿ ಕಾಂಗ್ರೆಸ್ ನದು ಸದಾ ದ್ವಂದ್ವ ನಿಲುವು. ತನ್ನ ಅನುಕೂಲತೆಗೆ ತಕ್ಕಂತೆ ಈ ಸಂಬಂಧವನ್ನು ನೈತಿಕ ಹಾಗೂ ಅನೈತಿಕವಾಗಿಟ್ಟುಕೊಳ್ಳುವುದು ಕಾಂಗ್ರೆಸ್ ಗೆ ಛಾಳಿಯಾಗಿದೆ. ಈ ಕಾರಣಕ್ಕಾಗಿಯೇ ಎಸ್ ಡಿಪಿಐ ಕಾಂಗ್ರೆಸ್ ಬಿ ಟೀಂ ಎಂಬುದು ನಮ್ಮ ವಾದವಾಗಿದೆ.

ರಾಜ್ಯಪಾಲರ ನಿವಾಸಕ್ಕೆ ಬಾಂಗ್ಲಾ ಮಾದರಿಯಲ್ಲಿ ನುಗ್ಗುತ್ತೇವೆ ಎಂದ ಕಾಂಗ್ರೆಸ್ ಎಂಎಲ್ ಸಿ ಐವನ್ ಡಿಸೋಜಾ ಅವರ ಹೇಳಿಕೆ ಎಸ್ ಡಿಪಿಐ ಜತೆ ಕಾಂಗ್ರೆಸ್ ಪುನರ್ವಿವಾಹದ ಸೂಚನೆ ಎನ್ನಬಹುದಾಗಿದೆ.

ಈ ಹೊಂದಾಣಿಕೆ ದಕ್ಷಿಣ ಕನ್ನಡ‌ ಹಾಗೂ ಬೇರೆ ಜಿಲ್ಲೆಗಳಿಗೆ ಅಪಾಯದ ಮುನ್ಸೂಚನೆಯಾಗಿದೆ.‌ ಈ ಎರಡು ಪಕ್ಷಕ್ಕೆ ನಿಷೇಧಿತ ಪಿಎಫ್ ಐ‌ ಜತೆಗೆ ಅಂತರ್ ಸಂಬಂಧ ಇತ್ತೆಂಬುದು‌ ಜಗಜ್ಜಾಹೀರು. ಮುಂಬರುವ ದಿನಗಳಲ್ಲಿ ಈ ಅಪಾಯಕಾರಿ ಕೂಟ ಹಿಂದು ಕಾರ್ಯಕರ್ತರು ಹಾಗೂ ಸಂಘಟನೆಗಳಿಗೆ ತೊಂದರೆ ನೀಡುವುದು ನಿಶ್ಚಿತವಾಗಿದ್ದು ಸಮಾಜದ ನೆಮ್ಮದಿಗೆ ಕಂಟಕ ಕಾರಿಯಾಗಿ ಪರಿಣಮಿಸಲಿದೆ‌.‌ಇವರಿಬ್ಬರ ಹಿಡನ್ ಅಜೆಂಡಾ ಸಾರ್ವಜನಿಕವಾಗಿ ಬಯಲುಗೊಳಿಸಬೇಕಿದೆ ಎಂದು ಅವರು‌ ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top