ಎಸ್. ಐ. ಗೆ ದಂಡ: ನ್ಯಾಯಾಲಯದ ಆದೇಶ

Picture of RB NEWS

RB NEWS

Bureau Report

ಕಾರ್ಕಳ : 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ “ಚೌಕಿದಾರ್ ಶೇರ್ ಹೇ” ಎಂಬ ಸ್ಟಿಕರ್ ನ್ನು ಕಾರಿನ ಹಿಂಬದಿಯ ಗ್ಲಾಸ್ ಗೆ ಅಳವಡಿಸುದು, ಚುನಾವಣೆಯ ನೀತಿ ಸಂಹಿತಿ ಉಲ್ಲಂಘನೆ ಆಗಿದೆ ಹಾಗೂ ಸ್ಟಿಕರ್ ನ್ನು ತೆಗೆಯಲು ಹೇಳಿದಾಗ ಕಾರ್ಕಳದ ಯುವ ನ್ಯಾಯವಾದಿ ಎಂ.ಕೆ ವಿಪುಲ ತೇಜ್ ಚುನಾವಣಾ ಅಧಿಕಾರಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕೆ ಅಡಿ ಮಾಡಿರುತಾರೆಂದು ಸುಳ್ಳು ದೂರನ್ನು ಆಧರಿಸಿ ಆಗಿನ ಕಾರ್ಕಳ ನಗರ ಪೊಲೀಸ್ ಉಪ ನಿರೀಕ್ಷಿಕ ಪ್ರಕರಣ ದಾಖಲಿಸಿ ಬಂಧನಕ್ಕೆ ಯತ್ನಿಸಿದರು.

ಸದರಿ ಪ್ರಕರಣವನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಆಧಾರ ರಹಿತ ಪ್ರಕರಣವೆಂದು ರದ್ದು ಪಡಿಸಿತು.

ಈ ಹಿನ್ನಲೆಯಲ್ಲಿ ಮಾನ ಹಾನಿ ಸಂಭವಿಸಿದ ಬಗ್ಗೆ ಎಂ ಕೆ ವಿಪುಲ್ ತೇಜ್ ಅವರು ನಂಜ ನಾಯ್ಕ್ ಮತ್ತು ಇತರರ ವಿರುದ್ಧ ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದರು.

ಈ ದಾವೆಯಲ್ಲಿ ನ್ಯಾಯಾಲಯವು ನಂಜ ನಾಯ್ಕ್ ಮತ್ತು ಸರ್ಕಾರ ಜಂಟಿಯಾಗಿ ಹಾಗೂ ಪ್ರತ್ಯೇಕವಾಗಿ ರೂ. 5೦,೦೦೦ ವನ್ನು ಆದೇಶದ ದಿನಾಂಕದಿಂದ 2 ತಿಂಗಳ ಒಳಗೆ ಎಂ ಕೆ ವಿಪುಲ್ ತೇಜ್ ಅವರಿಗೆ ಪಾವತಿಸಬೇಕೆಂದು ಆದೇಶಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top