ಎಟಿಎಂನಲ್ಲಿ ಯುವಕರಿಬ್ಬರ ಮಾಯಜಾಲ: ಹಣ ಕಳೆದುಕೊಂಡ ದಂಪತಿ

Picture of RB NEWS

RB NEWS

Bureau Report

ಕಾರ್ಕಳ: ಎಟಿಎಂಗೆ ಹೋಗಿ ಹಣ ಡ್ರಾ ಮಾಡುವಾಗ ಅಪರಿಚಿತ ವ್ಯಕ್ತಿಗಳು ಹಣ ವಂಚನೆ ಮಾಡಿದ ಘಟನೆ ಹೆಬ್ರಿ ಯಲ್ಲಿ ನಡೆದಿದೆ.

ವಸಂತ ಹಾಗೂ ಸುನೀತಾರವರು ಶಿವಪುರ ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಎಟಿಎಮ್‌ನಿಂದ ಹಣ ತೆಗೆಯುವುದಕ್ಕಾಗಿ ಹೆಬ್ರಿ ಎಸ್‌ಬಿಐ ಬ್ಯಾಂಕ್ ಎಟಿಮ್‌ನಲ್ಲಿ ಹಣ ಡ್ರಾ ಮಾಡಲು ಎಟಿಎಮ್ ಒಳಗೆ ಹೋಗಿ ಕಾರ್ಡ್ ಹಾಕಿದಾಗ ಹಣ ಬಾರದೆ ಇದ್ದಾಗ ಆಗ ಅಲ್ಲಿಯೇ ಪಕ್ಕದಲ್ಲಿ ಇಬ್ಬರು ಅಪರಿಚಿತ ಯುವಕರು ನಿಂತಿದ್ದು ಅದರಲ್ಲಿ ಒಬ್ಬ ವ್ಯಕ್ತಿ ತಾನು ಹಣ ಡ್ರಾ ಮಾಡಿಕೊಡುವುದಾಗಿ ಹೇಳಿ ಎಟಿಎಮ್ ಕಾರ್ಡ ತೆಗೆದುಕೊಂಡು ಪಾಸ್‌ವರ್ಡ್ ಕೇಳಿ ಎಟಿಎಮ್‌ಗೆ ಕಾರ್ಡ್ ಹಾಕಿ ನಂತರ ಹಣ ಬರುವುದಿಲ್ಲವಾಗಿ ಹೇಳಿ ಕಾರ್ಡ್ ವಾಪಾಸು ನೀಡಿದ್ದಾನೆ.

ನಂತರ ಸುನೀತಾರವರು ಎಟಿಎಮ್ ಕಾರ್ಡ್‌ನಲ್ಲಿ ಎನೋ ಸಮಸ್ಯೆ ಆಗಿರಬಹುದು ಎಂದು ಶಿವಪುರ ಕೆನರಾ ಬ್ಯಾಂಕ್‌ಗೆ ಹೋಗಿ ಪಾಸ್ ಪುಸ್ತಕ ತೋರಿಸಿದಾಗ ಅಜೆಕಾರ್ ಎಟಿಎಮ್‌ನಿಂದ 10000 ಹಾಗೂ ಇನ್ನೊಮ್ಮೆ 2500 ರೂಪಾಯಿ ಹಣ ಡ್ರಾ ಆಗಿರುವುದಾಗಿ ತಿಳಿಸಿದ್ದಾರೆ. ವಸಂತ ಹಾಗೂ ಸುನೀತಾರವರು ಹಣ ಡ್ರಾ ಮಾಡಿರುವುದಿಲ್ಲ ಎಂದು ಹೇಳಿದ್ದು, ಬ್ಯಾಂಕ್‌ನವರು ಎಟಿಎಮ್ ಕಾರ್ಡ್ ಚೆಕ್ ಮಾಡಿ ಇದು ನಿಮ್ಮ ಖಾತೆಗೆ ಸಂಬಂದಿಸಿದ ಎಟಿ ಮ್ ಕಾರ್ಡ್ ಆಗಿರುವುದಿಲ್ಲ. ಈ ಕಾರ್ಡ್‌ನಲ್ಲಿ 70000 ಹಣ ಡ್ರಾ ಆಗಿರುವುದಾಗಿ ತಿಳಿಸಿರುತ್ತಾರೆ.

ಹೆಬ್ರಿಯ ಎಸ್‌ಬಿಐ ಎಟಿಎಮ್‌ನಲ್ಲಿ ಇಬ್ಬರು ಅಪರಿಚಿತ ಯುವಕರು ಎಟಿಎಮ್‌ನಲ್ಲಿ ಹಣ ತೆಗೆದುಕೊಡುವುದಾಗಿ ಹೇಳಿ ಕಾರ್ಡ್ ತೆಗೆದುಕೊಂಡಿದ್ದು, ಮೋಸ ಮಾಡುವ ಉದ್ದೇಶದಿಂದ ನಂಬಿಸಿ ಅವರಲ್ಲಿ ಇದ್ದ ಎಟಿಎಮ್ ಕಾರ್ಡ್ ತೆಗೆದುಕೊಂಡು ಅದನ್ನು ಬದಲಿಸಿ ಬೇರೆ ಎಟಿಎಮ್ ಕಾರ್ಡ್‌ಕೊಟ್ಟು ಅವರ ಹೆಂಡತಿಯ ಕಾರ್ಡ್ ಬಳಸಿ ಹಣ ಡ್ರಾ ಮಾಡಿ ಮೋಸ ಮಾಡಿರುವ ಬಗ್ಗೆ
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹೆಬ್ರಿ ಹಾಗೂ ಕಾರ್ಕಳ ತಾಲೂಕಿನಲ್ಲಿ ಒಟ್ಟು ಮೂರು ಪ್ರಕರಣ ದಾಖಲಾಗಿದ್ದು , ಈ ಪೈಕಿ ಅಜೆಕಾರು ಠಾಣೆ ವ್ಯಾಪ್ತಿಯಲ್ಲಾದ ಪ್ರಕರಣವನ್ನು ಅಜೆಕಾರು ಪೋಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top