ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ ರೂ.50 ಲಕ್ಷ ದರೋಡೆ

Picture of RB NEWS

RB NEWS

Bureau Report

ಕಾಸರಗೋಡು: ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ ರೂ.50 ಲಕ್ಷ ದರೋಡೆ ಗೈದ ಘಟನೆ ಉಪ್ಪಳಪೇಟೆಯಲ್ಲಿ ನಡೆದಿದೆ.

ವಾಹನದ ಗಾಜನ್ನು ಒಡೆದು ಹಣ ದರೋಡೆ ಮಾಡಿದ್ದಾರೆ. ಉಪ್ಪಳ ಪೇಟೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ನ ಎ ಟಿ ಎಂ ಮೆಷಿನ್ ಗೆ ಹಣ ತುಂಬಿಸಲು ಬಂದಿದ್ದ ಸಂದರ್ಭ ಈ ಘಟನೆ ನಡೆದಿದೆ.

ವಾಹನದ ಗಾಜು ಪುಡಿಯಾದ ಸ್ಥಿತಿಯಲ್ಲಿ ಕಂಡುಬಂದಿದೆ. ಪರಿಶೀಲಿಸಿದಾಗ 50 ಲಕ್ಷ ರೂ. ಇದ್ದ ಬಾಕ್ಸ್ ನಾಪತ್ತೆಯಾಗಿತ್ತು. ಖಾಸಗಿ ಏಜೆನ್ಸಿಯ ವಾಹನದಲ್ಲಿ ಹಣವನ್ನು ತಂದು ಎಟಿಎಂ ಗೆ ತುಂಬಿಸಲಾಗುತ್ತಿತ್ತು. ವಾಹನದ ಗಾಜನ್ನು ಒಡೆದು ಕೃತ್ಯ ನಡೆಸಲಾಗಿದೆ.

ಮಂಜೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು, ವಾಹನದ ಚಾಲಕ ಮತ್ತು ನೌಕರನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸಮೀಪದ ಸಿಸಿಟಿವಿ ಕ್ಯಾಮರಾ ಮೂಲಕ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top