ಊರ್ಮಿಳಾ ದೀಪಾವಳಿ

Picture of RB NEWS

RB NEWS

Bureau Report

ದೀಪಾವಳಿ ದಾವಿಸಿದೆ ಕಳೆದಿದೆ ಅಯೋಧ್ಯೆಯ ಕತ್ತಲೆ..
ಆದರೆ ಊರ್ಮಿಳೆಯ ಒಳಗೆಲ್ಲ ಬರೀ ಕತ್ತಲೆ
ವಿರಹದ ಕಾರ್ಮುಗಿಲು ಕವಿದ ಕತ್ತಲೆ

ವನದಲೆಲ್ಲೊ ಅಲೆಯುತಿಹ
ವಲ್ಲಭನ ವಿರಹದಲ್ಲಿ
ಚಿಲ್ಲನೆ ಕಿಮ್ಮತಿವೆ ಸುದೀರ್ಘ ಅಗಲಿಕೆಯ ನೋವು
ಕರಕರಗಿ ನೀರಾಗಿ ಮೇಣಸುರಿದಂತೆ
ಹೊತ್ತುರಿಯುತ್ತಿದೆ ಊರ್ಮಿಳಯ ಒಡಲು
ಬೀರುತ್ತಾ ಧರೆಗೆಲ್ಲ ಬೆಳಕ ಹೊನಲು…
ಆದರೆ…
ಉರಿಯುತ್ತಿರುವ ಊರ್ಮಿಳಯ ಒಳಗೆಲ್ಲ ಬರೀ ಕತ್ತಲು….
ಹದಿನಾಲ್ಕು ಯುಗದ ಪ್ರತಿ ರಾತ್ರಿ ಕಳೆದು
ಬೆಳಕು ಹರಿವನಕ ತಾನಾಗುವಳು ಬೆಳಕು

ಕಗ್ಗತ್ತಲ ಗವಿಯ ಗರ್ಭವೀ ಒಡಲು
ಕಮರಿ ಹೋಗುವುದಿ ಒಡಲತಮದಲಿ ಬೆಳಕು
ವಿರಹದ ನೂರು ನೋವು ದೇಹಕ್ಕೆ…
ನಗೆಯ ನೀಡುವ ನಲಿವ ನುಣಿಸುವ
ದೀರ್ಘ ವಿರಹದ ಪುಟಕಿಟ್ಟ ಬಂಗಾರದ ಊರ್ಮಿಳಾ
ಧನ್ಯೇ ನೋವುಂಡ ಊರ್ಮಿಳಾ
ದುಮ್ಮಿಕ್ಕುವ ಯೌವ್ವನದಿ ವಿರಹಿ ಊರ್ಮಿಳ…
ದೇವರಲಿ ದೈನ್ಯದಲಿ ಮೊರೆ ಇಡುತಿಹಳು
ದಂಡಕಾರಣ್ಯದ ಅಲೆಯುತಿಹ
ವತಿಯ ಕನಸಿನಲ್ಲಿ ಓಲೈಸುವಳು….

ಆಕಾಶದ ಹಾಲ್ಗೆನ್ನೆ ಬಿಸಿಲಲ್ಲಾಡಿ ಕೆಂಪಾಗುತ್ತಿರುವಾಗ
ಕೆಂಪಾಗುತ್ತವೆ ವಿರಹಿ ಊರ್ಮಿಳೆಯ ಕದಪು
ನೆನೆದುಪತಿಯ ಸನಿಹವ.,.
ನೆನಪು ನವಿರಾಗಿ ನವಿರೆಲ್ಲ ಕಹಿಯಾಗಿ
ದೆಹಗಹಿಸುತ್ತದೆ ವಾಸ್ತವ

… ಊರ್ಮಿಳ ಏಕಾಂಗಿ…

.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top