ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದ ನರಿಕೊಂಬುವಿನ ಯುವಕನ ಅಕಾಲಿಕ ನಿಧನ

Picture of RB NEWS

RB NEWS

Bureau Report

ಬಂಟ್ವಾಳ : ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ರವಿ ಸಫಲ್ಯರ ಮಗ ಶ್ರೀ ರಜತ್ (25)ಎಂಬುವವರು ಉದ್ಯೋಗ ನಿಮಿತ್ತ ದಕ್ಷಿಣ ಆಫ್ರಿಕಾ ದೇಶಕ್ಕೆ ತೆರಳಿದ್ದು ಎ.5ರಂದು ಅಕಾಲಿಕವಾಗಿ ನಿಧನರಾಗಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ರಜತ್ ಮೃತ ದೇಹವನ್ನು ಊರಿಗೆ ತಂದು ನರಿಕೊಂಬು ಗ್ರಾಮದ ನಾಯಿಲ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

ಮೃತರು ತಂದೆ, ತಾಯಿ, ಹಾಗೂ ಅಪಾರ ಬಂಧು ಮಿತ್ರಗಳನ್ನು ಅಗಲಿದ್ದಾರೆ.

ಮೃತ ಶರೀರವನ್ನು ಊರಿಗೆ ತರಲು ವಿದೇಶಾಂಗ ಇಲಾಖೆ ಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕಿಸಿ ಸಂಸದ ಬ್ರಿಜೇಶ್ ಚೌಟ ಸಹಕರಿಸಿದರು.

ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್, ಬಿಜೆಪಿ ಕ್ಷೇತ್ರ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್. ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಪುರುಷೋತ್ತಮ ಸಾಲಿಯಾನ್ .ದಿನೇಶ್ ಅಮ್ಟೂರ್,ಉದಯ ಕುಮಾರ್ ಶೆಟ್ಟಿ, ಪ್ರೇಮನಾಥ್ ಶೆಟ್ಟಿ ಅಂತರ, ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರುಗಳು ಸಹಕರಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top