ಉದ್ಯಮಿಯ ಕೊಲೆಗೈದು 596 ಪವನ್ ಚಿನ್ನಾಭರಣ ಎಗರಿಸಿದ ತಂಡ ಪೊಲೀಸರ ಬಂಧನದಲ್ಲಿ !

Picture of RB NEWS

RB NEWS

Bureau Report

2023 ಎಪ್ರೀಲ್ ತಿಂಗಳಲ್ಲಿ ಅಬ್ದುಲ್ ಗಫೂರ್ ಮೃತಪಟ್ಟಿದ್ದರು. ಮಂತ್ರವಾದದ ಮೂಲಕ ಇಮ್ಮಡಿ ಮಾಡಿಕೊಡಿಸುವುದಾಗಿ ನಂಬಿಸಿ ಅಬ್ದುಲ್ ಗಫೂರ್ ಕೈಯ್ಯಿಂದ ಇವರು 596ಪವನ್ ಚಿನ್ನಾಭರಣ ಪಡೆದಿದ್ದರು. ಅದನ್ನು ಮರಳಿ ಕೊಡದೇ ಇರುವುದಕ್ಕಾಗಿ ಕೊಲೆ ನಡೆಸಿದ್ದರೆಂಬುದು ಈಗ ಬೆಳಕಿಗೆ ಬಂದಿದೆ.

ಪ್ರಕರಣಕೆ ಸಂಬಂಧಿಸಿ ಮೇಲ್ಪರಂಬ ಪೋಲೀಸ್ ಠಾಣಾ ವ್ಯಾಪ್ತಿಯ 1ನೇ ಆರೋಪಿ ಉಬೈದ್(38), ಎರಡನೇ ಆರೋಪಿ ಮತ್ತು ಮಂತ್ರವಾದಿನಿ ಎಂದು ಕರೆಸಿಕೊಂಡಿರುವ, ಉಬೈದ್ ನ ಪತ್ನಿ ಶಮೀಮ(38), ಮೂರನೇ ಆರೋಪಿ ಅಸ್ನೀಪ್(34)ಮತ್ತು ಆಯಿಷ(38) ಎಂಬಿವರನ್ನು ಪ್ರತ್ಯೇತ ತನಿಖಾ ತಂಡ ಬಂಧಿಸಿದೆ. ಚಿನ್ನ ವಶಪಡಿಸಿದ ಈ ತಂಡ ಬಳಿಕ ಗಫೂರ್ ಅವರನ್ನು ಕೊಲೆಗೈದಿರುವುದಾಗಿ ತನಿಖಾ ತಂಡ ತಿಳಿಸಿದೆ.

ಅಬ್ದುಲ್ ಗಫೂರ್ ಮನೆಯಲ್ಲಿದ್ದ 4ಕಿಲೋ ಅಧಿಕ ತೂಕದ (596ಪವನ್) ಯಾರ ಕೈ ಸೇರಿದೆ ಎಂಬ ತನಿಖೆಯಿಂದಾಗಿ ಆರೋಪಿಗಳು ಸೆರೆ ಸಿಕ್ಕಿದ್ದು, ಕೊಲೆ ಬಯಲಾಗಿದೆ.

ಗಲ್ಫ್ ರಾಷ್ಟ್ರಗಳಲ್ಲಿ ಹಲವಾರು ಸೂಪರ್ ಮಾರ್ಕೆಟ್ ಗಳು ಮತ್ತು ಇತರ ಉದ್ಯಮಗಳನ್ನು ಹೊಂದಿದ್ದ ಅನಿವಾಸಿ ಉದ್ಯಮಿ ಕಾಸರಗೋಡು ಬೇಕಲ, ಪೂಚಕ್ಕಾಡ್ ಫಾರೂಖಿಯ ಮಸೀದಿ ಬಳಿಯ ನಿವಾಸಿ ಎಂ.ಸಿ.ಅಬ್ದುಲ್ ಗಫೂರ್ (55) ಅವರು 2023 ಎಪ್ರೀಲ್ 14ರಂದು ಮುಂಜಾನೆ ಮನೆಯಲ್ಲಿ ಯಾರೂ ಇಲ್ಲದ ದಿನ ಬೆಡ್ ರೂಂ ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರ ಪತ್ನಿ, ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಘಟನೆ ನಡೆದಿತ್ತು.

ರಂಜಾನ್ ತಿಂಗಳಾಗಿದ್ದರಿಂದ ಅದು ಸಹಜ ಸಾವು ಆಗಿರಬಹುದೆಂದು ಕುಟುಂಬಸ್ಥರು ತೀರ್ಮಾನಿಸಿ ಮೃತದೇಹವನ್ನು ಸಮಾಧಿ ಮಾಡಿದ್ದರು. ಆ ನಂತರ ಕುಟುಂಬಸ್ಥರು ಗಫೂರ್ ಹಾಜಿ ಅವರು ಸಾಲ ಮಾಡಿ ಖರೀದಿಸಿದ್ದ ಚಿನ್ನಾಭರಣಗಳನ್ನು ಎಣಿಕೆ ಮಾಡಿದಾಗ 596 ಪವನ್ ಚಿನ್ನಾಭರಣ ನಾಪತ್ತೆಯಾಗಿರುವುದು ಕಂಡುಬಂತು. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಗಫೂರ್ ಸಾವಿನ ಬಗ್ಗೆ ಸಂಶಯಗೊಂಡು ಈ ಬಗ್ಗೆ ಬೇಕಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗಫೂ‌ರ್ ಪುತ್ರ ಮೂಸಾ ದೂರು ನೀಡಿದ್ದರು. 2023, ಏಪ್ರಿಲ್ 27 ರಂದು ಗಫೂರ್ ಹಾಜಿ ಅವರ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದಾಗ ವರದಿಯಲ್ಲಿ ತಲೆಗೆ ಗಾಯವಾಗಿರುವ ಸುಳಿವು ಲಭ್ಯವಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ ಶಿಲ್ಪಾ ಅವರ ಮಾರ್ಗದರ್ಶನದಲ್ಲಿ, ಡಿಸಿಆರ್ ಬಿ ಡಿವೈಎಸ್ಪಿ ಕೆ.ಜೆ. ಜಾನ್ಸನ್ ಮತ್ತು ಬೇಕಲ್ ಇನ್ಸ್ ಪೆಕ್ಟರ್ ಕೆ.ಪಿ ಶೈನ್ ನೇತೃತ್ವದಲ್ಲಿ ತನಿಖೆಗೆ ಇಳಿದ ಪೊಲೀಸರಿಗೆ ಚಿನ್ನ ಲಪಟಾಯಿಸಿ ಗಫೂ‌ರ್ ಹಾಜಿ ಅವರನ್ನು ಕೊಲೆಗೈದಿರುವುದು ದೃಡಪಟ್ಟಿತು. ಈ ಸಂಬಂಧ ಮಾಟಗಾತಿ ಜಿನ್ನುಮ್ಮ ಎಂದು ಕರೆಯಲ್ಪಡುವ ಮಹಿಳೆ, ಆಕೆಯ ಪತಿ ಉಬೈದ್, ಪೂಚ್ಯಾಡ್ ನಿವಾಸಿ ಅಸ್ಟೀಫಾ, ಮಧೂರ್ ನಿವಾಸಿ ಆಯೇಷಾ ಎಂಬವರನ್ನು ಬಂಧಿಸಲಾಗಿದೆ.

ಗಫೂ‌ರ್ ಹಾಜಿ ಕೊಲೆಗೆ ಸಂಬಂಧಿಸಿದಂತೆ ಕೇರಳ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಗಫೂರ್ ಹಾಜಿ ಅವರ ಕುಟುಂಬದ ಸದಸ್ಯರು, ಸ್ಥಳೀಯರು ಸೇರಿದಂತೆ 40 ಕ್ಕೂ ಅಧಿಕ ಮಂದಿಯ ವಿಚಾರಣೆ ನಡೆಸಿತ್ತು. ಚಿನ್ನವನ್ನು ಸುಮಾರು ಮೂರು ಆಭರಣ ಮಳಿಗೆಗಳಲ್ಲಿ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ.

ಮೃತ ವ್ಯಕ್ತಿ ಮತ್ತು ಮಹಿಳೆ ನಡುವೆ ವಾಟ್ಸಾಪ್ ಸಂದೇಶಗಳು ವಿನಿಮಯವಾಗಿದ್ದವು. ಮೃತ ಗಪೂರ್‌ ಹಾಜಿಯಿಂದ ಮಹಿಳೆ ಈ ಹಿಂದೆ 10 ಲಕ್ಷ ರೂಪಾಯಿ ಹಾಗೂ ಚಿನ್ನಾಭರಣ ಪಡೆದಿರುವ ದಾಖಲೆಗಳನ್ನು ತಂಡ ಸಂಗ್ರಹಿಸಿತ್ತು. ಅರ್ಧ ಲಕ್ಷಕ್ಕೂ ಹೆಚ್ಚು ಮೌಲ್ಯದ
ಚಿನ್ನದ ಬಣ್ಣದ ಸೀಸದ ಕಾಗದದ ಮೇಲೆ ಬರೆದಿಟ್ಟ ಮ್ಯಾಜಿಕ್ ಪ್ಲೇಟ್ ಗಾಗಿ ಈ ಗುಂಪು ಸಂತ್ರಸ್ತೆಯಿಂದ 55 ಸಾವಿರ ರೂಪಾಯಿ ವಸೂಲಿ ಮಾಡಿದೆ ಎಂಬಿತ್ಯಾದಿ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಮಾಟಗಾತಿ ಜಿನ್ನುಮ್ಮ ಕ್ರಿಮಿನಲ್ ಬ್ಯಾಕ್ ಗೌಂಡ್ ಹಿನ್ನೆಲೆ ಹೊಂದಿದ್ದು, ಹನಿಟ್ರ್ಯಾಪ್, ಮಾಟ ಮಂತ್ರದಲ್ಲಿ ನಿಸ್ಸಿಮಳು. ಈ ಹಿಂದೆ ಹನಿಟ್ರ್ಯಾಪ್ ಬಳಸಿ ಚಿನ್ನಾಭರಣ ಹಾಗೂ ಹಣ ದೋಚಿದ್ದ ಪ್ರಕರಣದಲ್ಲಿ ಜಿನ್ನುಮ್ಮ, ಆಕೆಯ ಪತಿ 14 ದಿನಗಳ ಕಾಲ ರಿಮಾಂಡ್ ನಲ್ಲಿದ್ದರು. ಮಹಿಳೆ ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ಚಿನ್ನ ಕದ್ದ ಪ್ರಕರಣವೂ ದಾಖಲಾಗಿತ್ತು. ಅನಿವಾಸಿ ಉದ್ಯಮಿ ಗಫೂ‌ರ್ ಹಾಜಿ ಅವರನ್ನು ಮಾಟ ಮಂತ್ರದ ಮೂಲಕ ವಶೀಕರಣ ನಡೆಸಿ ಅವರ ಮನೆ ಸೇರಿದ್ದಳು.

ಮಧ್ಯರಾತ್ರಿಯಲ್ಲಿ ವಾಮಾಚಾರ, ಗುಡಿಸಲು ತೋಡುವುದು, ಮಂತ್ರಾಕ್ಷತೆ ಕಟ್ಟುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪತ್ತುತ್ತಿ ಎಂಬ ಮಲೆಯಾಳಂ ಭಾಷಿಕ ಕರ್ನಾಟಕ ಯುವತಿಯ ಆತ್ಮ ಪ್ರವೇಶಿಸಿದ್ದು, ಮಾಟ ಮಂತ್ರ ಪರಿಹಾರ ಸೂಚಿಸಿ, ಮಾಟ ಮಂತ್ರ ಮುಗಿದ ಬಳಿಕ ವಂಚನೆ ತಂಡ ಸಂತ್ರಸ್ತ ಮಹಿಳೆಯಿಂದ ಚಿನ್ನಾಭರಣ ಸೇರಿದಂತೆ ಲಕ್ಷಗಟ್ಟಲೆ ದೋಚಿದೆ ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top