ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ,ಆರೋಗ್ಯ ಅಗತ್ಯ

Picture of RB NEWS

RB NEWS

Bureau Report

ಕಾರ್ಕಳ: ಸ್ಥಳೀಯ ಶಂಕರ ಪ್ರತಿಷ್ಠಾನದ 40ನೇ ವಾರ್ಷಿಕೋತ್ಸವ ಮಹಾಸಭೆ ಆಗಸ್ಟ್ ನಾಲ್ಕರಂದು ಕಾರ್ಕಳ ತಳ್ಳಾರು ರಸ್ತೆಯ ಶ್ರೀ ಗೋವಿಂದ ಧಾರ್ಮಿಕ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆಯ ಪ.ಕುಲಾಧಿಪತಿ ಡಾ.ಶರತ್ ರಾವ್ ಕೆ. -ಟಿ.ಎಂ.ಎ.ಪೈ ಯವರು ಮಾಡಿದಂತೆ ಯಾವುದೇ ಸಮಾಜವನ್ನು ಮೇಲೆತ್ತಬೇಕಿದ್ದರೆ ಮೊತ್ತ ಮೊದಲು ಆರೋಗ್ಯ, ಶಿಕ್ಷಣ ಕ್ಕೆ ಪ್ರಾಧಾನ್ಯತೆ ನೀಡಬೇಕು. ಇದರಿಂದ ಶ್ರೀಮಂತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಹಿರಿಯರಾದ ಇನ್ನಾ ಶಶಿಕಾಂತ ರಾವ್ ಹಾಗೂ ವಸಂತಿ ರಾವ್ ರನ್ನು ಸನ್ಮಾನಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಂತರಾಷ್ಟ್ರೀಯ ಕ್ರೀಡಾ ಪಟು ಪದ್ಮನಾಭ ಭಂಡಿ, ಪುರೋಹಿತ ಮುಳಿಕಾರ್ ಹರೀಶ್ ಭಟ್, ಲೆಕ್ಕ ಪರಿಶೋಧಕ ಸಂಧ್ಯಾ ಜಿ., ಉದ್ಯಮಿ ರಾಜೇಶ್ವರಿ ಐ.ಕೆ., ರಾಜ್ಯ ಮಟ್ಟದ ತೀರ್ಪುಗಾರ ಕೋದಂಡ ರಾಮ ರಾವ್, ಉದ್ಯೋಗಿ ಐ.ಕೆ.ಸುವಾಸಿನಿ ಯವರನ್ನು ಈ ಸಂದರ್ಭದಲ್ಲಿ ಸಂಮಾನಿಸಲಾಯಿತು. ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕೆ.ಕೇಶವ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕರ್ವಾಲು ಸತೀಶ್ ರಾವ್ ವರದಿ ವಾಚಿಸಿದರು.

ಕೋಶಾಧಿಕಾರಿ ಕೋದಂಡ ರಾಮ ರಾವ್ ಆಯವ್ಯಯ ಮಂಡಿಸಿದರು. ಮಹಿಳಾ ವೇದಿಕೆಯ ಅಧ್ಯಕ್ಷೆ ವತ್ಸಲಾ ಶ್ಯಾನುಭಾಗ್ ಸ್ವಾಗತಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಸಾವಿತ್ರಿ ಮನೋಹರ ಹಾಜರಿದ್ದರು. ವಿದ್ಯಾವತಿ ಬೈಲೂರು ಹಾಗೂ ಶೈಲಜಾ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ಸುಬ್ರಹ್ಮಣ್ಯ ಶರ್ಮ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top