ಉತ್ತಮ ಪರಿಹಾರಕ್ಕಾಗಿ ದಾಖಲೆಗಳೆಲ್ಲವನ್ನು ಹೊಂದಿರುವುದು ಅಗತ್ಯ

Picture of RB NEWS

RB NEWS

Bureau Report

  • ಪುತ್ತೂರು ಕಾಲೇಜು ಗ್ರಾಹಕ ವೇದಿಕೆ ಉದ್ಘಾಟನೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ (ಸ್ವಾಯತ್ತ) 2024-25 ನೇ ಸಾಲಿನ ಗ್ರಾಹಕ ಸರ್ಟಿಫಿಕೇಟ್ ಕೋರ್ಸ್ ನ ಗ್ರಾಹಕ ವೇದಿಕೆ ಉದ್ಘಾಟನೆ ನಡೆಯಿತು.

ಕಾಲೇಜಿನ ಸ್ನಾತೋತ್ತರ ವಿಭಾಗದ ಸೆಮಿನಾರ್ ಹಾಲಿನಲ್ಲಿ ನಡೆದ ಈ ಕಾರ್ಯಕ್ರಮವನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆಯ ಮಾಜಿ ಅಧ್ಯಕ್ಷ ಪ್ರಕಾಶ್ ಕೆ ಅವರು ದೀಪ ಬೆಳಗಿ ಉದ್ಘಾಟಿಸಿದರು ಮಾತನಾಡಿ, ಭಾರತದಲ್ಲಿರುವ ಗ್ರಾಹಕ ಹಕ್ಕು, ಕರ್ತವ್ಯ, ಪರಿಹಾರ ಪಡೆಯುವ ಮಾರ್ಗ ಇತ್ಯಾದಿ ಎಲ್ಲದರ ಬಗೆಗೂ ಉದಾಹರಣೆಯೊಂದಿಗೆ ಮಾಹಿತಿಯನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ಪತ್ರಕರ್ತ, ಲೇಖಕ ರಾಯಿ ರಾಜಕುಮಾರ ಮೂಡುಬಿದಿರೆ ರವರು ಮಾತನಾಡಿ “ಗ್ರಾಹಕನೇ ರಾಜ” ಹೇಗೆ ಎಂಬುದನ್ನು ಹಲವಾರು ಸಾಂದರ್ಭಿಕ ಮಾಹಿತಿಗಳೊಂದಿಗೆ ವಿವರಿಸಿದರು. ಅಲ್ಲದೆ ಗ್ರಾಹಕ ಜಾಗರೂಕನಾಗಿದ್ದರೆ ತನ್ನ ಜವಾಬ್ದಾರಿಯೊಂದಿಗೆ ಹಕ್ಕನ್ನು ಸಾಧಿಸಬಹುದಾಗಿದೆ. ನ್ಯಾಯ, ನಿಷ್ಠೆ, ಪ್ರಾಮಾಣಿಕವಾಗಿ ವ್ಯವಹರಿಸಿದರೆ ಎಲ್ಲೆಡೆ ಬೆಲೆ, ಗೌರವ, ಶ್ರೇಷ್ಠತೆ ದೊರೆಯುತ್ತದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ. ಅಂತೋನಿ ಪ್ರಕಾಶ್ ಮೊಂತೆರೋ ಅವರು ಕಾರ್ಯಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಮಾರ್ಗದರ್ಶಕರಿಗಿಂತ ವಿದ್ಯಾರ್ಥಿಗಳು ಮುತುವರ್ಜಿ ವಹಿಸಿ ಕಾರ್ಯರೂಪಕ್ಕೆ ತಂದು ಕಾಲೇಜನ್ನು ಮಂಚೂಣಿಯಲ್ಲಿ ಕೊಂಡೊಯ್ಯಬೇಕೆಂದರು.

ವೇದಿಕೆಯಲ್ಲಿ ಗ್ರಾಹಕ ಸಂಯೋಜಕ ಉಪನ್ಯಾಸಕರಾದ ಪ್ರವೀಣ್ ಡಿ ಹಾಗೂ ಸ್ವಾತಿ ಶೆಟ್ಟಿ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಿಯಾಂಕ ಸ್ವಾಗತಿಸಿದರು. ಇಮ್ರಾನ್ ತಾಜ್ ನಿರ್ವಹಿಸಿದರು. ಬಾಸಿಲ್, ತನ್ವೀರ್ ಪಿಂಟೋ, ಲಿಖಿತ ಅತಿಥಿ ಗಳ ಪರಿಚಯ ಮಾಡಿಕೊಟ್ಟರು. ವಿಶ್ಮಿತ್ ಧನ್ಯವಾದ ಸಲ್ಲಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top