ಉಡುಪಿ ಶ್ರೀಕೃಷ್ಣನಿಗೆ ಐವತ್ತೈದು ಗ್ರಾಂ ಚಿನ್ನದ ಸರ ಸಮರ್ಪಣೆ



ಉಡುಪಿ : ಉಡುಪಿ ಅಷ್ಟಮಠದ ಪರಮ ಭಕ್ತರೂ, ಶ್ರೀಪಾದರ ಆಪ್ತರೂ ಆದ, ರಶ್ಮಿ ಹಾಗೂ ಶ್ರೀಕಾಂತ್ ಕ್ಯಾತ್ಸಂದ್ರ ದಂಪತಿ ಇವರು ಐವತ್ತೈದು ಗ್ರಾಂ ನ ,ಸುಮಾರು ನಾಲ್ಕುವರೆ ಲಕ್ಷ ಮೌಲ್ಯದ ಚಿನ್ನದ “ಲಕ್ಷ್ಮಿ-ಶಂಖ” ಸರವನ್ನು ಶ್ರೀಕೃಷ್ಣನಿಗೆ ಸಮರ್ಪಿಪಿಸಿದರು.
ಗುರುಗಳಾದ ಪೂಜ್ಯ ಪರ್ಯಾಯ ಶ್ರೀಪಾದರ ಮುಖಾಂತರ ಶ್ರೀ ಉಡುಪಿ ಕೃಷ್ಣನಿಗೆ ಇಷ್ಟಾರ್ಥವನ್ನು ಸಮರ್ಪಿಸಿದರು.
ಶ್ರೀಪಾದರು ದಂಪತಿಗಳಿಗೆ ಹರಸಿ ಅನುಗ್ರಹ ಮಂತ್ರಾಕ್ಷತೆ ನೀಡಿದರು.





































