ಉಡುಪಿ: ಮಟ್ಕಾ ಕಿಂಗ್ ಪಿನ್ ಅಂಬಾಗಿಲು ಲೀಯೋ ಸಹಿತ ಇಬ್ಬರ ಬಂಧನ
ಉಡುಪಿ: ಮಟ್ಕಾ ಕಿಂಗ್ ಪಿನ್ ಲೀಯೊ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ….

ಮಟ್ಕಾ ಚೀಟಿ ಬರೆಯುತ್ತಿದ್ದ ಆರೋಪಿ ವಿಠಲ ದೇವಾಡಿಗನನ್ನು ಶನಿವಾರ ಕುರ್ಕಾಲು ಗ್ರಾಮದ ಶಂಕರಪುರದ ಅಶ್ವತಕಟ್ಟೆ ಬಸ್ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದರು.
ಬಂಧಿತ ಆರೋಪಿ ವಿಠಲ ದೇವಾಡಿಗನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಜೂಜಾಟದ ಬುಕ್ಕಿ ಉಡುಪಿಯ ಲಿಯೋ ಕರ್ನೆಲಿಯೋ ಅವರು ಸೂಚಿಸಿದಂತೆ ನಾನು ಕಾನೂನು ಬಾಹಿರವಾಗಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡಿ ಅವರಿಂದ ಹಣ ಸಂಗ್ರಹ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.
ಪೊಲೀಸರು ಬಂಧಿತನಿಂದ ಮಟ್ಕಾ ಸಂಖ್ಯೆ ಬರೆದಿರುವ ಒಂದು ಚೀಟಿ, 1,200 ನಗದು ಹಣ, 1 ಬಾಲ್ ಪೆನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು, ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮೊದಲ ಆರೋಪಿ ವಿಠಲ ದೇವಾಡಿಗ ವಿರುದ್ಧ ಈಗಾಗಲೇ 12 ಪ್ರಕರಣಗಳು ದಾಖಲಾಗಿರುತ್ತದೆ. ಎರಡನೇ ಆರೋಪಿಯಾದ ಲಿಯೋ ಕರ್ನೇಲಿಯೋ ವಿರುದ್ಧ ಈಗಾಗಲೇ ಸುಮಾರು 34 ಪ್ರಕರಣಗಳು ದಾಖಲಾಗಿರುತ್ತದೆ. ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.






































